Friday, June 5, 2026
Homeಕರಾವಳಿವಿಟ್ಲದಲ್ಲಿ ಖಾಸಗಿ ಬಸ್ ಚಾಲಕರ ನಡುವೆ ಹೊಡೆದಾಟ

ವಿಟ್ಲದಲ್ಲಿ ಖಾಸಗಿ ಬಸ್ ಚಾಲಕರ ನಡುವೆ ಹೊಡೆದಾಟ

- Advertisement -
- Advertisement -

ವಿಟ್ಲ; ಖಾಸಗಿ ಬಸ್ ಚಾಲಕರ ನಡುವೆ ಪರಸ್ಪರ ಹೊಡೆದಾಟವಾಗಿರುವ ಘಟನೆ ವಿಟ್ಲ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ‌ ನಡೆದಿದೆ.

ಮಣಿಕಂಠ ಮತ್ತು ಮಹೇಶ್ ಬಸ್ ಚಾಲಕರಿಬ್ಬರು ಬಸ್ ನಿಲ್ದಾಣದಲ್ಲಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಹೇಶ್ ಬಸ್ ಚಾಲಕ ಮಣಿಕಂಠ ಬಸ್ ಚಾಲಕನ‌ ಮೇಲೆ ಹಲ್ಲೆ ನಡೆಸಿದ್ದಾರೆಎನ್ನಲಾಗಿದೆ.

ಬಸ್ ಟೈಮಿಂಗ್ಸ್ ವಿಚಾರಕ್ಕೆ ಜಗಳ ನಡೆದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ವಿಟ್ಲ ಬಸ್ ಸ್ಟ್ಯಾಂಡ್ ನಲ್ಲಿ ಟೈಮಿಂಗ್ಸ್ ವಿಚಾರಕ್ಕೆ ಇಬ್ಬರು ಸಿಬ್ಬಂದಿ ಜಗಳವಾಡಿಕೊಂಡಿದ್ದರು.

- Advertisement -

Latest News

error: Content is protected !!