Sunday, June 7, 2026
HomeUncategorizedಮಂಗಳೂರು: ಛಾವಣಿಯಿಂದ ಬಿದ್ದು ಕಾರ್ಮಿಕ‌ ಸಾವು

ಮಂಗಳೂರು: ಛಾವಣಿಯಿಂದ ಬಿದ್ದು ಕಾರ್ಮಿಕ‌ ಸಾವು

- Advertisement -
- Advertisement -

ಮಂಗಳೂರು: ಛಾವಣಿಯಿಂದ ಬಿದ್ದು ಕಾರ್ಮಿಕ‌ ಸಾವನ್ನಪ್ಪಿರುವ ಘಟನೆ ಬಾರೆಬೈಲಿನ ಅಗ್ನಿ ಶಾಮಕ ಠಾಣೆ ಬಳಿ‌ ನಡೆದಿದೆ. ಬಂಟ್ವಾಳದ ಅಮ್ಮಂಜೆಯ ದೀಪಕ್ (29 ವರ್ಷ) ಮೃತ ದುರ್ದೈವಿ.

ದೀಪಕ್‌ ಅವರು ಗುತ್ತಿಗೆದಾರ ಪ್ರವೀಣ್ ಎಂಬವರ ಜೊತೆ 8 ವರ್ಷಗಳಿಂದ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ಅವರು ಛಾವಣಿಯ ಶೀಟ್ ಅಳವಡಿಸುವಾಗ ಆಯತಪ್ಪಿ ಸುಮಾರು 30 ಅಡಿ ಕೆಳಗೆ ಬಿದ್ದಿದ್ದರು. ತಲೆಗೆ ತೀವ್ರ ಏಟಾಗಿತ್ತು. ಅವರನ್ನು ಅಲ್ಲಿದ್ದ ಕಾರ್ಮಿಕರು ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕೂಡಲೇ ವಾಹನದಲ್ಲಿ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ಆದರೆ‌ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.

ದೀಪಕ್‌ ಅವರ ಅಕ್ಕನ ಗಂಡ ನಾಗೇಶ್‌ ಅವರು ನಗರ ಪೂರ್ವ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಕೆಲಸ ಮಾಡಿಸುವಾಗ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದ ಬಗ್ಗೆ ಗುತ್ತಿಗೆದಾರ ಪ್ರವೀಣ್ ಮತ್ತು ನಿರ್ಮಿತಿ ಕೇಂದ್ರದ ಎಂಜಿನಿಯರ್ ನವೀತ್ ವಿರುದ್ಧ ಮೊಕದ್ದಮೆ ದಾಖಲಾಗಿದೆ.

- Advertisement -

Latest News

error: Content is protected !!