Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಹೀಗೊಬ್ಬ ಹೀನ ತಂದೆ: ತನ್ನ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರವೆಸಗಿದ ಪಾಪಿ

ಮಂಗಳೂರಿನಲ್ಲಿ ಹೀಗೊಬ್ಬ ಹೀನ ತಂದೆ: ತನ್ನ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರವೆಸಗಿದ ಪಾಪಿ

- Advertisement -
- Advertisement -

ಮಂಗಳೂರು : ತನ್ನಿಬ್ಬರು ಪುತ್ರಿಯರಿಬ್ಬರ ಮೇಲೆ ಪಾಪಿ ತಂದೆಯೊಬ್ಬ ನಿರಂತರ ಅತ್ಯಾಚಾರವೆಸಗಿರುವ ಪ್ರಕರಣ ಮಂಗಳೂರಿನ ಸುರತ್ಕಲಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಕಾಮುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈತ ತನ್ನ 17 ಮತ್ತು 18 ವರ್ಷದ ಇಬ್ಬರು ಪುತ್ರಿಯರ ಮೇಲೆ ಕಳೆದ ಒಂದೂವರೆ ವರ್ಷದಿಂದ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ.ಮನೆಯಲ್ಲಿ ಪತ್ನಿ ಇಲ್ಲದ ಸಂದರ್ಭದಲ್ಲಿ ಆರೋಪಿ ಈ ಹೇಯ ಕೃತ್ಯ ಎಸಗುತ್ತಿದ್ದ.

ಇತ್ತೀಚೆಗೆ ಈ ಸಹೋದರಿಯರು ತಾಯಿ ಜೊತೆಗೆ ಮಾವನ ಮನೆಗೆ ತೆರಳಿದಾಗ ಅಲ್ಲಿ ಈ ವಿಷಯ ತಿಳಿಸಿದ್ದಾರೆ.ವಿಷಯ ತಿಳಿದ ಬಳಿಕ ಬಾಲಕಿಯರ ಮಾವನ ಕಡೆಯವರು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!