Friday, June 5, 2026
Homeಕರಾವಳಿಮಂಗಳೂರು: ಮಹಿಳೆಯ ಚಿನ್ನಾಭರಣ ಕಳವು ಪ್ರಕರಣದ ಆರೋಪಿಯ ಬಂಧನ

ಮಂಗಳೂರು: ಮಹಿಳೆಯ ಚಿನ್ನಾಭರಣ ಕಳವು ಪ್ರಕರಣದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ವಾಹನವೊಂದರಲ್ಲಿ ಬರುತ್ತಿದ್ದ ಮಹಿಳೆಯ ಚಿನ್ನಾಭರಣವನ್ನು ಕಳವುಗೈದ ಆರೋಪಿಯನ್ನು ಕದ್ರಿ ಪೊಲೀಸರು ಇಂದು ಬಂಧಿಸಿದ್ದಾರೆ. ಮೂಲತಃ ಭದ್ರಾವತಿಯ ಪ್ರಸ್ತುತ ದಾಂಡೇಲಿಯ ನಿವಾಸಿ ಪಿ. ಜ್ಞಾನರತ್ನಂ ಕೃಪಾರಾವ್ (45) ಬಂಧಿತ ಆರೋಪಿ.

ನಗರದ ನವಭಾರತ್ ಸರ್ಕಲ್ ಬಳಿಯ ನಿವಾಸಿಯಾಗಿರುವ ವಸಂತಾ ಎಂಬವರು ಮಾ.10ರಂದು ಭದ್ರಾವತಿಯಿಂದ ಮಂಗಳೂರಿಗೆ ವಾಹನವೊಂದರಲ್ಲಿ ಬರುತ್ತಿದ್ದಾಗ ಆಕೆಯ ಬಳಿಯಿದ್ದ ಚಿನ್ನಾಭರಣವಿರುವ ಬ್ಯಾಗ್ ಕಳವಾಗಿತ್ತು. ಈ ಬಗ್ಗೆ ವಸಂತಾ ಅವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬ್ಯಾಗ್‌ನಲ್ಲಿ ಸುಮಾರು 2.50 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿತ್ತು. ಈ ಬಗ್ಗೆ ತನಿಖೆ ನಡೆಸಿದ ಕದ್ರಿ ಪೊಲೀಸರು ಆರೋಪಿ ಜ್ಞಾನರತ್ನಂ ಕೃಪಾರಾವ್‌ನನ್ನು ಬಂಧಿಸಿದ್ದಾರೆ.

ಅಲ್ಲದೆ ಆತ ಹುಬ್ಬಳ್ಳಿ, ದಾಂಡೇಲಿ, ಭದ್ರಾವತಿಯ ಮಣಪ್ಪುರಂ, ಮುತ್ತೂಟ್, ಐಐಎಫ್‌ಸಿ ಫೈನಾನ್ಸ್‌ಗಳಲ್ಲಿ ಅಡವಿಟ್ಟಿದ್ದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!