Sunday, June 7, 2026
Homeತಾಜಾ ಸುದ್ದಿಮೊಬೈಲ್ ನಲ್ಲಿ ಗೇಮ್ ಆಡುತ್ತಾ ಕಾಲ ಕಳೆಯುತ್ತಿದ್ದ ಬಾಲಕ:ಮಗನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಪ್ಪ

ಮೊಬೈಲ್ ನಲ್ಲಿ ಗೇಮ್ ಆಡುತ್ತಾ ಕಾಲ ಕಳೆಯುತ್ತಿದ್ದ ಬಾಲಕ:ಮಗನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಪ್ಪ

- Advertisement -
- Advertisement -

ಲಕ್ನೋ:  13 ವರ್ಷದ ತನ್ನ ಮಗ ಆನ್‍ಲೈನ್ ತರಗತಿ ಬದಲಿಗೆ ಮೊಬೈಲ್‍ನಲ್ಲಿ ಹೆಚ್ಚು ಗೇಮ್ ಆಡುತ್ತಲೇ ಕಾಲ ಕಳೆಯುತ್ತಾನೆ ಎಂದು ಆರೋಪಿಸಿ ತಂದೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಅಚ್ಚರಿಯ ಘಟನೆಯೊಂದು ನಡೆದಿದೆ.

ಹೌದು…ನೋಯ್ಡಾದ ಡಂಕೌರ್ ರಾಮ್‍ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ತನ್ನ 13 ವರ್ಷದ ಮಗನ ವಿರುದ್ಧ ಉತ್ತರ ಪ್ರದೇಶದ ಗೌತಮ ಬುದ್ಧ ನಗರದ ನಿವಾಸಿಯಾಗಿರುವ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಾಲಕನ ತಂದೆ, ಆನ್‍ಲೈನ್ ತರಗತಿಗಳನ್ನು ನಿರ್ಲಕ್ಷಿಸಿ ಯಾವಾಗಲೂ ಗೇಮ್ ಆಡುತ್ತಿರುತ್ತಾನೆ. ಮೊಬೈಲ್‍ನಲ್ಲಿ ಗೇಮ್ ಆಡದೇ, ಅಧ್ಯಯನದತ್ತ ಗಮನಹರಿಸುವಂತೆ ಮಗನನ್ನು ಹೆದರಿಸಿ ಎಂದು ತಂದೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಗೇಮ್ ಆಡಬೇಡ ಎಂದು ನಾನು ಬೈದರೆ, ಪಕ್ಕದ ಮನೆಗೆ ಹೋಗಿ ಅಲ್ಲಿ ಗೇಮ್ ಆಡುತ್ತಾನೆ ಎಂದು ತಂದೆ ದೂರಿದ್ದಾರೆ. ಅಲ್ಲದೇ ಕೆಲವು ಬಾರಿ ಮನೆಯಲ್ಲಿ ವಸ್ತುಗಳನ್ನು ಕದ್ದು, ಅವುಗಳನ್ನು ಅಂಗಡಿಗಳಲ್ಲಿ ಮಾರಿದ್ದಾನೆ ಎಂದಿದ್ದಾರೆ. ತಂದೆಯ ದೂರು ಆಲಿಸಿದ ಪೊಲೀಸರು, ತಂದೆ ಹಾಗೂ ಮಗನ ಹೇಳಿಕೆ ಪಡೆದು, ಕೌನ್ಸಲಿಂಗ್ ನಡೆಸಿ ಮನೆಗೆ ಕಳುಹಿಸಿದ್ದಾರೆ.

- Advertisement -

Latest News

error: Content is protected !!