Saturday, May 18, 2024
Homeತಾಜಾ ಸುದ್ದಿಸರ್ವಧರ್ಮದ ಸಂದೇಶ ಸಾರುತ್ತಿರುವ ನಿವೃತ್ತ ಮುಸ್ಲಿಂ ಶಿಕ್ಷಕ: ಕೋಟಿ ಬಾರಿ ಶ್ರೀರಾಮನ ಹೆಸರು ಬರೆದ ವೃದ್ಧ

ಸರ್ವಧರ್ಮದ ಸಂದೇಶ ಸಾರುತ್ತಿರುವ ನಿವೃತ್ತ ಮುಸ್ಲಿಂ ಶಿಕ್ಷಕ: ಕೋಟಿ ಬಾರಿ ಶ್ರೀರಾಮನ ಹೆಸರು ಬರೆದ ವೃದ್ಧ

spot_img
- Advertisement -
- Advertisement -

ಕೋಲಾರ: ಕೋಟಿ ಬಾರಿ ಶ್ರೀರಾಮನ ಹೆಸರು ಬರೆದು ಅದನ್ನು ಅಯೋಧ್ಯೆಗೆ ಕಳ್ಸೋದಕ್ಕೆ ಕೋಲಾರದ ನಿವೃತ್ತ ಮುಸ್ಲೀಂ ಶಿಕ್ಷಕರೊಬ್ಬರು ರೆಡಿಯಾಗಿದ್ದಾರೆ.ಆ ಮೂಲಕ ಶ್ರೀರಾಮನ ಬಗ್ಗೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ 96 ವರ್ಷದ ಹಿರಿಯ ಶಿಕ್ಷಕ ಪಾಚಾಸಾಭ್.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದಲ್ಲಿ 1923 ರಲ್ಲಿ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಇವರು,  ಕನ್ನಡದಲ್ಲಿ 8ನೇ ತರಗತಿವರೆಗೆ ಹಾಗೂ 4ನೇ ತರಗತಿಯನ್ನು ಇಂಗ್ಲೀಷ್ ಭಾಷೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಹಿಂದೂಗಳ ಆರಾಧ್ಯ ದೈವ ಕಲಿಯುಗದ ಮಹಾ ಪುರುಷ ಶ್ರೀರಾಮನ ಜಪ ಮಾಡುತ್ತಾ, ರಾಮನಿಗೆ ತಮ್ಮ ಭಕ್ತಿಯನ್ನ ಸಮರ್ಪಣೆ ಮಾಡುತ್ತಿದ್ದಾರೆ. ನಿವೃತ್ತಿಯಾದ ಬಳಿಕ ಪಿಂಚಣಿಯಲ್ಲಿ ಶ್ರೀರಾಮಕೋಟಿ ಬರೆದುಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಶಿಕ್ಷಕರಾಗಿದ್ದಾಗ 22 ವರ್ಷಗಳ ಹಿಂದೆ ಸ್ನೇಹಿತನೊಂದಿಗೆ ಭದ್ರಚಲಂ ದೇವಾಲಯಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಸಾಧು ಶ್ರೀರಾಮ ಕೋಟಿ ಬರೆಯುತ್ತಿದ್ದನ್ನು ಕಂಡು ವಿಚಾರಿಸಿದ ಇವರು ಹಾಗೆ ಬರೆದಲ್ಲಿ ನಿನಗೆ ಒಳ್ಳೆಯದಾಗುತ್ತದೆ ಎಂದಿದ್ದಾರೆ. ಅಂದಿನಿಂದ ನಾನು ಸಹ ಶ್ರೀರಾಮ ಕೋಟಿ ಬರೆಯುವುದನ್ನು ಪ್ರಾರಂಭಿಸಿ, ಪುಸ್ತಕದಲ್ಲಿ ಬರೆಯುವುದರ ಜೊತೆಗೆ ಎಕ್ಕದ ಎಲೆ, ಆಲದ ಎಲೆ, ಕಂಚಿನ ಎಲೆಯ ಮೇಲೂ ಶ್ರೀರಾಮ ಕೋಟಿ ಬರೆಯುತ್ತಿದ್ದಾರೆ. ಈಗ ಒಟ್ಟು 1 ಕೋಟಿ ಬರೆದಿದ್ದಾರೆ, ಅಕ್ಟೋಬರ್ 15ಕ್ಕೆ 1 ಕೋಟೆ ರಾಮಕೋಟೆಯನ್ನು ಬರೆದು ಮುಗಿಸಿದ್ದಾರೆ. ಇನ್ನು ರಾಮಕೋಟೆಯನ್ನು ಭದ್ರಚಲಂಗೆ ಅಥವಾ ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆಗೆ ಯಾರಾದರೂ ಜನಪ್ರತಿನಿಧಿಗಳ ಕೈಯಲ್ಲಿ ಅರ್ಪಿಸುವ ಕನಸು ಇವರದ್ದು. ಆ ಮೂಲಕ ಅವರು ಸರ್ವಧರ್ಮದ ಸಂದೇಶ ಸಾರಿದ್ದಾರೆ.

- Advertisement -
spot_img

Latest News

error: Content is protected !!