Thursday, June 4, 2026
Homeಕೊಡಗುಮಡಿಕೇರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆ, ಮಗ ಆತ್ಮಹತ್ಯೆ

ಮಡಿಕೇರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆ, ಮಗ ಆತ್ಮಹತ್ಯೆ

- Advertisement -
- Advertisement -

ಮಡಿಕೇರಿ: ಕ್ಷುಲ್ಲಕ‌ ಕಾರಣಕ್ಕಾಗಿ ತಂದೆ ಮತ್ತು ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಿಳಗುಂದ ಗ್ರಾಮದಲ್ಲಿ ನಡೆದಿದೆ. ತಂದೆ ಸುಬ್ಬಯ್ಯ( 75), ಮಗ ಗಿರೀಶ್ ಗಣಪತಿ (36) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ.

ನಿನ್ನೆ ತಂದೆ ಮತ್ತು ಮಗನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದ್ದು ಪುತ್ರ ನಿಂದಿಸಿದ ಎಂಬ ಕಾರಣಕ್ಕೆ ತಂದೆ ಸುಬ್ಬಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಂತರ ತಂದೆಯ ಆತ್ಮಹತ್ಯೆ ನೋಡಿ ಮನನೊಂದು ಪುತ್ರ ಗಿರೀಶ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ನೇಣು ಹಾಕಿಕೊಂಡಿದ್ದರೆ, ತೋಟದ ಕೆರೆಗೆ ಹಾರಿ ಪುತ್ರ ಸಾವನ್ನಪ್ಪಿದ್ದಾರೆ. ರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!