Tuesday, April 23, 2024
Homeಇತರಪೊಲೀಸರನ್ನು ಟಾರ್ಗೆಟ್ ಮಾಡಿ ಹೂಸು ಬಿಟ್ಟಿದ್ದಕ್ಕೆ 44 ಸಾವಿರ ರೂ. ದಂಡ..!

ಪೊಲೀಸರನ್ನು ಟಾರ್ಗೆಟ್ ಮಾಡಿ ಹೂಸು ಬಿಟ್ಟಿದ್ದಕ್ಕೆ 44 ಸಾವಿರ ರೂ. ದಂಡ..!

spot_img
- Advertisement -
- Advertisement -

ವಿಯೆನ್ನಾ: ಕಳೆದ ವರ್ಷ ವಿಯೆನ್ನಾದಲ್ಲಿ ಪೊಲೀಸರ ಮೇಲೆ ‘ಪ್ರಚೋದನಕಾರಿಯಾಗಿ ಹೂಸು ಬಿಡುವ ಮೂಲಕ’ ಸಾರ್ವಜನಿಕ ಸಭ್ಯತೆಯನ್ನು ಮರೆತಿದ್ದಕ್ಕೆ ಆಸ್ಟ್ರಿಯಾದ ವ್ಯಕ್ತಿಯೊಬ್ಬನಿಗೆ 500 ಯುರೋಗಳಷ್ಟು ಅಂದರೆ ಸುಮಾರು 44,000 ರೂ. ದಂಡವನ್ನು ವಿಧಿಸಲಾಗಿದೆ.

ಈ ಕುರಿತು ದಂಡದ ಮೊತ್ತ ಕೇಳಿ ಶಾಕ್ ಆದ ಹೂಸು ಬಿಟ್ಟ ವ್ಯಕ್ತಿ, ದುಬಾರಿ ದಂಡದ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಈಗ ದಂಡವನ್ನು 100 ಯುರೋಗಳಿಗೆ ಸುಮಾರು 9 ಸಾವಿರ ದಂಡ ರೂ. ಗೆ ಕಡಿಮೆ ಮಾಡಿದ್ದಾರೆ ಎಂದು LadBible ಸುದ್ದಿ ಸಂಸ್ಥೆ ವರದಿ ಮಾಡಿದೆ.

ನ್ಯಾಯಾಲಯದಲ್ಲಿ, ಆ ವ್ಯಕ್ತಿಯು ತನಗೆ ವಿಧಿಸಲ್ಪಟ್ಟ ಭಾರಿ ಮೊತ್ತದ ವಿರುದ್ಧ ವಾದ ಮಾಡಿದ್ದು, ಮತ್ತು ಆ ಘಟನೆ ಒಂದು ‘ಜೈವಿಕ ಪ್ರಕ್ರಿಯೆ’ ಎಂದು ಹೇಳಿದನು. ಅಲ್ಲದೆ, ‘ಉದ್ದೇಶಪೂರ್ವಕವಾಗಿ’ ಮಾಡಿದರೂ ಸಹ ಗಾಳಿಯನ್ನು ಬೀಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನ್ಯಾಯಸಮ್ಮತವೆಂದು ಪರಿಗಣಿಸಬೇಕು ಎಂದು ಹೇಳಿಕೊಂಡಿದ್ದ. ಉದ್ಯಾನವನದ ಬೆಂಚ್‌ನಿಂದ ಎದ್ದು, ಪೊಲೀಸ್‌ ಅಧಿಕಾರಿಗಳನ್ನು ನೋಡುತ್ತಾ ಉದ್ದೇಶಪೂರ್ವಕವಾಗಿಯೇ ಹೆಚ್ಚು ಶಬ್ದ ಮಾಡಿ ಹೂಸು ಬಿಟ್ಟಿದ್ದಾನೆ. ಹಾಗೂ ಪೊಲೀಸರು ಇದನ್ನು ಪ್ರಶ್ನಿಸಿ ನೀನು ಯಾರೆಂದು ಕೇಳಿದಾಗ ಆ ವ್ಯಕ್ತಿ ‘ಪ್ರಚೋದನಕಾರಿ ಮತ್ತು ಸಹಕಾರವಿಲ್ಲದೆ’ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು ಎಂದು ಡೈಲಿ ಮೇಲ್ ವರದಿ ಮಾಡಿದೆ.

- Advertisement -
spot_img

Latest News

error: Content is protected !!