Sunday, June 7, 2026
Homeತಾಜಾ ಸುದ್ದಿಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಖಳ ನಟ ಹರೀಶ್‌ ರೈ

ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಖಳ ನಟ ಹರೀಶ್‌ ರೈ

- Advertisement -
- Advertisement -

ಖ್ಯಾತ ಖಳನಟ ಹರೀಶ್ ರೈ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕೊನೆಯದಾಗಿ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸಿದ ಹರೀಶ್‌ಗೆ ಕ್ಯಾನ್ಸರ್ ತಗುಲಿದ್ದು, ಚಿಕಿತ್ಸೆಗೆ ಹಣದ ನೆರವು ಬೇಕಾಗಿದೆ. ಇಷ್ಟುದಿನ ತನ್ನ ಕಾಯಿಲೆಯನ್ನು ಮುಚ್ಚಿಟ್ಟಿದ್ದ ಹರೀಶ್‌ಗೆ ಇಂದು ದೊಡ್ಡ ದೊಡ್ಡ ಸ್ಟಾರ್ ನಟರು ಸಹಾಯ ಮಾಡುವುದಾಗಿ ಹೇಳಿದ್ದಾರಂತೆ.‌

ಹರೀಶ್​ ರೈ ಅವರ ಚಿಕಿತ್ಸೆಗೆ ಹಣದ ಅನಿವಾರ್ಯತೆ ಇದೆ. ‘ಫ್ಯಾಮಿಲಿ ಅನ್ನೋರು ಯಾರೂ ಬರಲ್ಲ. ಕಷ್ಟದಲ್ಲಿ ಅವರು ಸಹಾಯ ಮಾಡಲ್ಲ. ಜನರು ಬರುತ್ತಾರೆ’ ಎಂದು ಅವರು ನಂಬಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ‘ಕೆಜಿಎಫ್​ 2 ಸಿನಿಮಾ ಶೂಟಿಂಗ್​ ಸಂದರ್ಭದಲ್ಲೂ ನನಗೆ ಗಂಟಲಲ್ಲಿ ಗಡ್ಡೆ ಇತ್ತು. ಆದರೂ ಕೂಡ ನಾನು ಶೂಟಿಂಗ್​ ಮಾಡಿದೆ. ಫೈಟಿಂಗ್​ ಸೀನ್​ ಸಹ ಮಾಡಿದೆ. ಗಡ್ಡೆ ಯಾರಿಗೂ ಕಾಣಿಸುತ್ತಿರಲಿಲ್ಲ. ನಾನು ಯಾರಿಗೂ ಹೇಳಲಿಲ್ಲ. ನಾನೇ ಮುಚ್ಚುಮರೆ ಮಾಡಿದೆ’ ಎಂದು ಹರೀಶ್​ ರೈ ಹೇಳಿದ್ದಾರೆ.

- Advertisement -

Latest News

error: Content is protected !!