Wednesday, June 3, 2026
Homeಕರಾವಳಿಉಡುಪಿಉಡುಪಿಯಲ್ಲಿ ಮುಸ್ಲಿಂ ಗ್ರಾಹಕರು ಬೇಡ ಎಂಬ ಫೇಕ್ ಪೋಸ್ಟ್ ವೈರಲ್

ಉಡುಪಿಯಲ್ಲಿ ಮುಸ್ಲಿಂ ಗ್ರಾಹಕರು ಬೇಡ ಎಂಬ ಫೇಕ್ ಪೋಸ್ಟ್ ವೈರಲ್

- Advertisement -
- Advertisement -

ಉಡುಪಿ: ಮುಸ್ಲಿಂ ಗ್ರಾಹಕರು ಬೇಡ ಎಂಬ ರೀತಿಯಲ್ಲಿ ಬಟ್ಟೆ ಮಳಿಗೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಪೋಸ್ಟ್ ವೈರಲ್ ಮಾಡಿದ್ದಾರೆ.‌ಪರಿಸ್ಥಿತಿಯ ಲಾಭ ಪಡೆದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಬಟ್ಟೆ ಮಳಿಗೆಯಲ್ಲಿ ಮುಸ್ಲಿಂ ಗ್ರಾಹಕರು ಅವಶ್ಯಕತೆ ಇಲ್ಲ ಎಂಬ ಫೇಕ್ ಪೋಸ್ಟ್ ವೈರಲ್ ಮಾಡಲಾಗಿದ್ದು, ಉಡುಪಿಯ ಉದ್ಯಾವರ ಜಯಲಕ್ಷ್ಮಿ ಮಳಿಗೆಯ ಪೋಸ್ಟ್ ದುರುಪಯೋಗಪಡಿಸಿಕೊಳ್ಳಲಾಗಿದೆ.

ಮುಸ್ಲಿಂ ಗ್ರಾಹಕರ ಅವಶ್ಯಕತೆ ಇಲ್ಲವೆಂದು ಬರೆದು ಕಿಡಿಗೇಡಿಗಳು ವಾಟ್ಸಾಪ್ ಗ್ರೂಪ್‌ಗಳಲ್ಲಿ ಫೇಕ್ ಪೋಸ್ಟ್ ವೈರಲ್ ಮಾಡಿದ್ದಾರೆ.

ಈ ಬಗ್ಗೆ ಉಡುಪಿ‌ ಸೆನ್ ಪೊಲೀಸ್ ಠಾಣೆಯಲ್ಲಿ ಉದ್ಯಾವರ ಜಯಲಕ್ಷ್ಮಿ ಸಿಲ್ಕ್ ಮಾಲಿಕರು ದೂರು ದಾಖಲಿಸಿದ್ದು ನಕಲಿ ಪೋಸ್ಟ್ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.

- Advertisement -

Latest News

error: Content is protected !!