Wednesday, May 15, 2024
Homeಕರಾವಳಿಸುಳ್ಯ; ಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ಬಹುಮಾನ ಬಂದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ...

ಸುಳ್ಯ; ಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ಬಹುಮಾನ ಬಂದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು;  ಕರೆ ಸ್ವೀಕರಿಸಿ ಸುಸ್ತಾಗಿ ಪೊಲೀಸರಿಗೆ ದೂರು ನೀಡಿದ ಕಲ್ಮಡ್ಕದ ಯುವಕ

spot_img
- Advertisement -
- Advertisement -

ಸುಳ್ಯ; ಕಲ್ಮಡ್ಕದ ಯುವಕನೊಬ್ಬನಿಗೆ ಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ಬಹುಮಾನ ಬಂದಿದೆ ಎಂದು ಯಾರೋ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ನಿರಂತರ ಕರೆಗಳು ಬರುತ್ತಿದ್ದು ಯುವಕ ಹಾಗೂ ಆತನ ಮನೆಯವರಿಗೆ ಇದರಿಂದ ಮಾನಸಿಕ ಕಿರಿಕಿರಿಯಾಗಿದೆ. ಹೀಗಾಗಿ ಕರೆಗಳ ಕಾಟದಿಂದ ಸುಸ್ತಾದ ಯುವಕ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ನಿವಾಸಿ ಗೌತಮ್‌ ಕುಲ್ಸಿ ಮನೆ (27) ಸ್ವಂತ ಪಿಕಪ್‌ ಇರಿಸಿಕೊಂಡು ಅದರಲ್ಲಿ ಚಾಲಕರಾಗಿ ದುಡಿಯುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ಅವರಿಗೆ ಕೇರಳ ಓಣಂ ಬಂಪರ್‌ ಲಾಟರಿ 25 ಕೋಟಿ ರೂ. ಗೆದ್ದಿದ್ದಾರೆಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದ ಯುವಕ ಹಾಗೂ ಅವರ ಮನೆಯವರಿಗೆ ತೀವ್ರ ಮಾನಸಿಕ ಕಿರಿಕಿರಿಯಾಗಿದೆ.

ಪ್ರತಿಯೊಬ್ಬರು ಕರೆ ಮಾಡಿ ವಿಚಾರಿಸುತ್ತಿರೋದರಿಂದ ಅವರಿಗ ಕರೆ ಸ್ವೀಕರಿಸೋದೇ ಕೆಲಸವಾಗಿದೆ. ಇದರಿಂದ ನೊಂದ ಗೌತಮ್‌ ಅವರು ಬೆಳ್ಳಾರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ತಮ್ಮ ವಿರುದ್ಧ ಅಪಪ್ರಚಾರ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.                                                                                                                                                                                                                                                                                                                                                                                                                                                                    

- Advertisement -
spot_img

Latest News

error: Content is protected !!