Saturday, May 4, 2024
Homeಕರಾವಳಿಮಂಗಳೂರು: ನಿಯಮ ಬಾಹಿರವಾಗಿ ನಕಲಿ ಮೆಡಿಕಲ್‌ ಸರ್ಟಿಫಿಕೆಟ್‌ ನೀಡುತ್ತಿದ್ದ ಆರೋಪ: ರೈಲ್ವೇ ಅಧಿಕಾರಿ ಸಹಿತ ಮೂವರ ಬಂಧನ

ಮಂಗಳೂರು: ನಿಯಮ ಬಾಹಿರವಾಗಿ ನಕಲಿ ಮೆಡಿಕಲ್‌ ಸರ್ಟಿಫಿಕೆಟ್‌ ನೀಡುತ್ತಿದ್ದ ಆರೋಪ: ರೈಲ್ವೇ ಅಧಿಕಾರಿ ಸಹಿತ ಮೂವರ ಬಂಧನ

spot_img
- Advertisement -
- Advertisement -

ಮಂಗಳೂರು: ನಿಯಮ ಬಾಹಿರವಾಗಿ ನಕಲಿ ಮೆಡಿಕಲ್‌ ಸರ್ಟಿಫಿಕೆಟ್‌ ಒದಗಿಸುತ್ತಿರುವ ಆರೋಪದಡಿ ಮೂವರನ್ನು ಬಂಧಿಸಲಾಗಿದೆ. ಮಂಗಳೂರಿನ ಸೆಂಟ್ರಲ್‌ ರೈಲ್ವೇ ನಿಲ್ದಾಣದ ಬಳಿಯ ಆರೋಗ್ಯ ಘಟಕದಲ್ಲಿ ನಿಯಮ ಬಾಹಿರವಾಗಿ ನಕಲಿ ಮೆಡಿಕಲ್‌ ಸರ್ಟಿಫಿಕೆಟ್‌ ಒದಗಿಸುತ್ತಿರುವ ಆರೋಪದಲ್ಲಿ ರೈಲ್ವೇ ಅಧಿಕಾರಿ ಸಹಿತ ಮೂವರನ್ನು ಬೆಂಗಳೂರಿನ ಸಿಬಿಐ ಭ್ರಷ್ಟಾಚಾರ ತಡೆ ದಳದವರು ಬಂಧಿಸಿದ್ದಾರೆ.

ಬಂಧಿತರಲ್ಲಿ ಅಸಿಸ್ಟೆಂಟ್‌ ಚೀಫ್‌ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಕೂಡ ಸೇರಿರುವುದಾಗಿ ತಿಳಿದುಬಂದಿದೆ. ಕಳೆದೊಂದು ವರ್ಷದಿಂದಲೇ ಈ ನಕಲಿ ಸರ್ಟಿಫಿಕೆಟ್‌ ನೀಡುವ ಜಾಲ ಕಾರ್ಯವೆಸಗುತ್ತಿತ್ತು. ದಕ್ಷಿಣ ರೈಲ್ವೇ, ನೈಋತ್ಯ ರೈಲ್ವೇಗೆ ಸೇರಿದ ಸಿಬ್ಬಂದಿಗೆ 1,500ಕ್ಕೂ ಅಧಿಕ ನಕಲಿ ಮೆಡಿಕಲ್‌ ಸರ್ಟಿಫಿಕೆಟ್‌ ನೀಡಿದ್ದಾಗಿ ತಿಳಿದುಬಂದಿದೆ.

ಶುಕ್ರವಾರ ಬೆಂಗಳೂರಿನಿಂದ ಆಗಮಿಸಿದ ಸಿಬಿಐ ಅಧಿಕಾರಿಗಳ ತಂಡ ರಾತ್ರಿಯವರೆಗೂ ಆರೋಗ್ಯ ಘಟಕದಲ್ಲಿ ಕಾರ್ಯಾಚರಣೆ, ತಪಾಸಣೆ ನಡೆಸಿದ್ದಲ್ಲದೆ ಸಂಬಂಧಿತ ದಾಖಲೆಗಳನ್ನು ಕಲೆಹಾಕಿದೆ. ರೈಲ್ವೇಯೊಂದಿಗೆ ಕೆಲಸ ಮಾಡುವ ನೂರಾರು ಪರವಾನಿಗೆಯುಳ್ಳ ವರ್ತಕರು, ಪೋರ್ಟರುಗಳು, ಹೌಸ್‌ಕೀಪಿಂಗ್‌ ಸಿಬ್ಬಂದಿ, ಕೇಟರರ್‌ಗಳು ಕಡ್ಡಾಯವಾಗಿ ಮೆಡಿಕಲ್‌ ಫಿಟ್‌ನೆಸ್‌ ಸರ್ಟಿಫಿಕೆಟನ್ನು ವರ್ಷಕ್ಕೊಮ್ಮೆ ರೈಲ್ವೇಗೆ ನೀಡಬೇಕಾಗುತ್ತದೆ. ಅದಿದ್ದರೆ ಮಾತ್ರವೇ ಅವರಿಗೆ ರೈಲ್ವೇ ನಿಲ್ದಾಣ ಮತ್ತು ರೈಲುಗಳಲ್ಲಿ ಕೆಲಸಕ್ಕೆ ಬಿಡಲಾಗುತ್ತದೆ. ದಲ್ಲಾಳಿಗಳ ನೆರವಿನೊಂದಿಗೆ ಆರೋಗ್ಯ ಘಟಕದಲ್ಲಿರುವ ಅಧಿಕಾರಿಗಳು ಯಾರದ್ದೇ ಆದರೂ ಆಧಾರ್‌ ಕಾರ್ಡ್‌ ನೀಡಿದರೆ ಅವರಿಗೆ ವಾಟ್ಸಾಪ್‌ ಮೂಲಕ ಸರ್ಟಿಫಿಕೆಟ್‌ ಒದಗಿಸುತ್ತಿದ್ದರು. ಇದಕ್ಕೆ ಅವರು 525 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕಿತ್ತು.

ಯಾವುದೇ ರೀತಿ ಆರೋಗ್ಯ ತಪಾಸಣೆ ನಡೆಸದೆ ಯಾರಿಗಾದರೂ ಸರ್ಟಿಫಿಕೆಟ್‌ ನೀಡುವುದು ನಿಯಮಕ್ಕೆ ವಿರುದ್ಧ. ಈ ಅಕ್ರಮ ಕಾರ್ಯವನ್ನು ಯಾರೋ ಸಿಬಿಐವರೆಗೂ ತಲಪಿಸಿದ್ದರಿಂದ ಅದರ ಭ್ರಷ್ಟಾಚಾರ ತಡೆ ಘಟಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

- Advertisement -
spot_img

Latest News

error: Content is protected !!