Sunday, May 19, 2024
Homeತಾಜಾ ಸುದ್ದಿಬೆಳ್ತಂಗಡಿ: ದೇವರಲ್ಲಿ ನಂಬಿಕೆ, ಶ್ರದ್ಧೆ, ಭಕ್ತಿ ಭಾರತಲ್ಲಿರುವಷ್ಟು ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ: ಮೂಡುಬಿದಿರೆ ಶ್ರೀ...

ಬೆಳ್ತಂಗಡಿ: ದೇವರಲ್ಲಿ ನಂಬಿಕೆ, ಶ್ರದ್ಧೆ, ಭಕ್ತಿ ಭಾರತಲ್ಲಿರುವಷ್ಟು ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ: ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮಿಜಿ

spot_img
- Advertisement -
- Advertisement -

ಬೆಳ್ತಂಗಡಿ: ದೇವರಲ್ಲಿ ನಂಬಿಕೆ, ಶ್ರದ್ಧೆ, ಭಕ್ತಿ ಭಾರತಲ್ಲಿರುವಷ್ಟು ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ, ನಾವು ಇಂತವರಿಂದ ಶಿಸ್ತು ಕಲಿತದಲ್ಲ ನಾವು ಭಾರತೀಯ ದೈವ ಪರಂಪರೆಯಿಂದ ಶಿಸ್ತನ್ನು ಕಲಿತಿದ್ದೇವೆ ಧರ್ಮದಿಂದ ಇರುವವರಿಗೆ ಮಾತ್ರ ದೇವರ ಅನುಗ್ರಹ ಸಿಗಲು ಸಾಧ್ಯ ಅದಕ್ಕಾಗಿ ಪ್ರತಿಯೊಬ್ಬರೂ ಸಮಾಜಧರ್ಮ, ಆತ್ಮಧರ್ಮ, ದೇಶಧರ್ಮವನ್ನು ಪಾಲಿಸಬೇಕು ಎಂದು ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮಿಜಿ ಅವರು ಹೇಳಿದರು.

ಕಳಿಯ ಗ್ರಾಮದ ಬದಿನಡೆ ಮತ್ತು ಮಂಜಲಡ್ಕ ದೈವಗಳ ಸಾನಿಧ್ಯದಲ್ಲಿ ಡಿ.21 ರಿಂದ 26ರವರೆಗೆ ನಡೆಯಲಿರುವ ಉಳ್ಳಾಕುಲು ಉಳ್ಳಾಲ್ತಿ,ರಕ್ತೇಶ್ವರಿ, ಮಹಿಷಂತಾಯ, ಪಂಜುರ್ಲಿ ದೈವಗಳ ಮತ್ತು ಮಂಜಲಡ್ಕ ದೈವ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ ಹಾಗೂ ಕಲ್ಕುಡ ದೈವಗಳ ಪ್ರತಿಷ್ಠಾ ಮಹೋತ್ಸವ ಕಲಶಾಭಿಷೇಕ ಮತ್ತು ನರ್ತನ ಸೇವೆ, ಕಾರ್ಯಕ್ರಮದ ಅಂಗವಾಗಿ ಡಿ.21ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಜೀವನದ ಆದರ್ಶ ಬದುಕನ್ನು ಭೂತಾರಾಧನೆಯಿಂದ ಪಡೆಯಬಹುದು ಮನುಷ್ಯರಲ್ಲಿ ವ್ಯಕ್ತಿ, ಶ್ರದ್ಧೆ, ಒಗ್ಗೂಡುವ ಶಕ್ತಿ ಇದ್ದಾಗ ದೈವ ನರ್ತನ ಒಲಿಯಲು ಸಾಧ್ಯ ಎಂದು ಹೇಳಿದರು.

ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ದೈವದೇವರನ್ನು ಆತ್ಮದಲ್ಲಿ ಗುರಿ ಮಂದಿರದಲ್ಲಿ ಆರಾಧಿಸಿ ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸುವ ಪರಂಪರೆ ಇದ್ದರೆ ಅದು ಭಾರತದಲ್ಲಿ ಮಾತ್ರ ವಿದೇಶಗಳಲ್ಲಿ ದೇವರುಗಳನ್ನು ಮ್ಯೂಸಿಯಂ ನಲ್ಲಿ ಇಟ್ಟು ಪ್ರಾರ್ಥಿಸುವ ಪರಂಪರೆ ಇಂದಿಗೂ ಮುಂದುವರೆದಿದೆ ಎಂದು ಹೇಳಿದರು. ತುಳು ನಾಡಿನಲ್ಲಿ ಎರಡು ಸಾವಿರಕ್ಕೂ ಅಧಿಕ ದೈವಗಳನ್ನು ಹೊಂದಿದ ಇತಿಹಾಸವಿದೆ ಅಲ್ಲದೆ ಹದಿನಾರು ಸಮುದಾಯಗಳು ದೈವಾರಾಧನೆಯಲ್ಲಿ ತೊಡಗಿ ಇತಿಹಾಸವನ್ನು ಸೃಷ್ಟಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಸುರ್ಯ ಗುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಚೆನ್ನೈ ನ ಸುಕೀರ್ತಿ ಜೈನ್, ಉದ್ಯಮಿ ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕರ, ಆಹಾರೋದ್ಯಮಿ ಶಿವಶಂಕರ್ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಕೆ, ಕಳಿಯ ಗ್ರಾಮ ಪಂಚಾಯತ್ ಸದಸ್ಯರುಗಳು, ಊರಿನ ಪ್ರಮುಖ ಸಂಘ ಸಂಸ್ಥೆ ಅಧ್ಯಕ್ಷರು ಮತ್ತಿತರರು ಉಪಸ್ತಿತರಿದ್ದರು.

- Advertisement -
spot_img

Latest News

error: Content is protected !!