Tuesday, May 7, 2024
Homeಕರಾವಳಿಉಡುಪಿಉಡುಪಿ: ಗ್ರಾಮ ಪಂಚಾಯಿತ್ ಉಪ ಚುನಾವಣೆ, ಮದ್ಯ ಮಾರಾಟ ನಿಷೇಧ !

ಉಡುಪಿ: ಗ್ರಾಮ ಪಂಚಾಯಿತ್ ಉಪ ಚುನಾವಣೆ, ಮದ್ಯ ಮಾರಾಟ ನಿಷೇಧ !

spot_img
- Advertisement -
- Advertisement -

ಉಡುಪಿ: 2021ರ ಗ್ರಾಮ ಪಂಚಾಯತ್ ಉಪ ಚುನಾವಣೆಗೆ ಜಿಲ್ಲೆಯಲ್ಲಿ ಡಿ . 27 ರಂದು ಬ್ರಹ್ಮಾವರ ತಾಲೂಕಿನ ನಾಲ್ಕೂರು , ಕಾಪು ತಾಲೂಕಿನ ಕೋಟೆ ಹಾಗೂ ಉಡುಪಿ ತಾಲೂಕಿನ ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಮತದಾನ ನಡೆಯಲಿದೆ ಈ ಹಿನ್ನಲೆಯಲ್ಲಿ ನಿಷೇದಾಜ್ಞೆ ಹೇರಿದೆ.

ರಾಜ್ಯ ಅಬಕಾರಿ ಕಾಯ್ದೆ ಸಾಮಾನ್ಯ ನಿಯಮಾವಳಿ 1967 ಕಲಂ 10 ( ಬಿ ) ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 308 ಎಸಿ ರ ಅನ್ವಯ ಮೇಲ್ಕಂಡ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಡಿ . 25 ರ ಸಂಜೆ 5 ಗಂಟೆಯಿಂದ ಡಿ . 27 ರ ಸಂಜೆ 5 ರ ವರೆಗೆ ಎಲ್ಲಾ ರೀತಿಯ ಮದ್ಯದಂಗಡಿ , ಮದ್ಯ ಮಾರಾಟ ಡಿಪೋ , ಮದ್ಯ ತಯಾರಿಕಾ ಡಿಸ್ಟಿಲರಿ , ಸ್ಟಾರ್ ಹೋಟೆಲ್, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಈ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ . ಆದೇಶ ನೀಡಿದ್ದಾರೆ.

- Advertisement -
spot_img

Latest News

error: Content is protected !!