Friday, June 26, 2026
Homeಕರಾವಳಿಉಡುಪಿಉಡುಪಿ: ವಿಪರೀತ ಮಳೆಯಿಂದಾಗಿ ರೈತರಿಗೆ ಸಂಕಷ್ಟ !

ಉಡುಪಿ: ವಿಪರೀತ ಮಳೆಯಿಂದಾಗಿ ರೈತರಿಗೆ ಸಂಕಷ್ಟ !

- Advertisement -
- Advertisement -

ಕಟಪಾಡಿ: ಇದೀಗ ಭತ್ತ ಕಟಾವು ಮಾಡುವ ಹೊತ್ತು. ಪ್ರಕೃತಿಯಲ್ಲಾಗುತ್ತಿರುವ ಏರುಪೇರಿನಿಂದ ರೈತರು ಕಂಗೆಟ್ಟಿದ್ದಾರೆ. ನಿರಂತರವಾಗಿ ಸುರಿದ ಭಾರೀ ಮಳೆಗೆ ಭತ್ತ ಇಳುವರಿ ಕಷ್ಟವಾಗಿದೆ. ರೈತರು ಬೇಸಾಯದಲ್ಲಿ ಕೈ ಸುಟ್ಟುಕೊಳ್ಳುವಂತಾಗಿದೆ.

ತೀವ್ರ ಮಳೆಯಿಂದಾಗಿ ಕಟಾವು ಪೂರೈಸಿದ ಬಳಿಕ ಜಾನುವಾರಗಳ ಮೇವಿಗೆ ಬೇಕಾಗಿರುವ ಬೈಹುಲ್ಲು ಕೂಡಾ ಗದ್ದೆಯಲ್ಲಿಯೇ ಕೊಳೆಯುವಂತಾಗಿದೆ. ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ಇದು ರೈತ ಹರೀಶ್ ಅವರ ಮಾತು.

ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆಂಪೇ ಗೌಡ ಪ್ರತಿಕ್ರಿಯಿಸಿದ್ದಾರೆ, ಈ ವಿಷಯ ಎಲ್ಲರ ಗಮನಕ್ಕೆ ಬಂದಿದೆ. ಎಲ್ಲರೂ ಈ ಕಷ್ಟ ಎದುರಿಸುತ್ತಿದ್ದಾರೆ. ಎನ್ ಡಿ ಆರ್ ಎಫ್ ಮಾನದಂಡದಂತೆ ಅರ್ಜಿ ಸಲ್ಲಿಸಿದ ರೈತರಿಗೆ ಸಹಾಯಧನವನ್ನು ಒದಗಿಸಲು ಸಾಧ್ಯವಾಗುವುದು ಎಂದಿದ್ದಾರೆ. ಸರಕಾರ ಇದರ ಕುರಿತು ಸೂಕ್ತ ಪರಿಹಾರ ನೀಡಬೇಕು.

- Advertisement -

Latest News

error: Content is protected !!