- Advertisement -
- Advertisement -
ಮುಂಬೈ : ಮಹಾರಾಷ್ಟ್ರದ ಪಾಲ್ಘರ್‌ನ ತಾರಾಪುರ ಪ್ರದೇಶದಲ್ಲಿ ರಾಸಾಯನಿಕ ಕಾರ್ಖಾನೆ ಘಟಕವೊಂದರಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಘಟನೆ ನಡೆದಾಗ ತಾರಾಪುರ ರಾಸಾಯನಿಕ ವಲಯದಲ್ಲಿರುವ ಸ್ಯಾನಿಟೈಸರ್ ಮತ್ತು ಹ್ಯಾಂಡ್ ವಾಶ್ ಘಟಕದಲ್ಲಿ 66 ಕಾರ್ಮಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಬೆಳಿಗ್ಗೆ 11.30 ಕ್ಕೆ ಹೊಗೆ ಕಾಣಿಸಿಕೊಂಡಿದ್ದು, ನಂತರ ದೊಡ್ಡ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ, ‘ಎಂದು ಅಧಿಕಾರಿ ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್ಗಳ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಅಗತ್ಯ ವಸ್ತುವನ್ನು ತಯಾರಿಸಲು ಕೊರೊನಾವೈರಸ್ ಲಾಕ್‌ಡೌನ್ ಮಧ್ಯೆ ಕೆಲಸ ಮಾಡಲು ಘಟಕಕ್ಕೆ ಅನುಮತಿ ನೀಡಲಾಗಿತ್ತು.
- Advertisement -
