Saturday, June 6, 2026
Homeಕರಾವಳಿಮಾಜಿ ಸಚಿವರ ಮಾತಿನ ಎಡವಟ್ಟು : ಕೆಪಿಸಿಸಿ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್!

ಮಾಜಿ ಸಚಿವರ ಮಾತಿನ ಎಡವಟ್ಟು : ಕೆಪಿಸಿಸಿ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್!

- Advertisement -
- Advertisement -

ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಎಡವಟ್ಟಿನಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೆಪಿಸಿಸಿ ಅಧ್ಯಕ್ಷರಾಗಿಬಿಟ್ಟಿದ್ದಾರೆ.

ಯಾದಗಿರಿಯಲ್ಲಿ ಇಂದು ನಳೀನ್ ಕುಮಾರ್ ಕಟೀಲ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೆಂದು ಬಾಬುರಾವ್ ಚಿಂಚನಸೂರ್ ಬಹಿರಂಗ ಕಾರ್ಯಕ್ರಮದಲ್ಲಿ ಸಂಬೋಧಿಸಿದ್ದಾರೆ.

ಜಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಮ್ಮುಖದಲ್ಲಿಯೇ ಬಾಬುರಾವ್ ಮಾತಿನ ಎಡವಟ್ಟು ಮಾಡಿದ್ದು,
ಯಾದಗಿರಿ ಜಿಲ್ಲಾ ಬಿಜೆಪಿ ನೂತನ ಕಚೇರಿ ಕಟ್ಟಡ ಶಿಲಾನ್ಯಾಸ ಎಡವಟ್ಟು ನಡೆದಿದೆ.

ನಂತರ ಸಾರಿ ಎಂದ ಬಾಬುರಾವ್ ಚಿಂಚನಸೂರ್ ಭಾಷಣ ಮುಂದುವರಿಸಿದ್ದು, ಚಿಂಚನಸೂರ್ ಎಡವಟ್ಟಿಗೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನಕ್ಕು ಸುಮ್ಮನಾಗಿದ್ದಾರೆ.

ಯಾದಗಿರಿ ನಗರದ ಚಿತ್ತಾಪುರ ರಸ್ತೆಯ ಗ್ರೀನ್ ಪಾರ್ಕ್ ನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

- Advertisement -

Latest News

error: Content is protected !!