Sunday, April 28, 2024
Homeತಾಜಾ ಸುದ್ದಿಕೋಟ ಶ್ರೀನಿವಾಸ ಪೂಜಾರಿ ಬಿಟ್ಟರೆ ಬೇರೆ ಯಾವ ಸಚಿವರೂ ಸರಿ ಇಲ್ಲ: ಬೆಂಗಳೂರಿನಲ್ಲಿ ಮಾಜಿ ಸಿಎಂ...

ಕೋಟ ಶ್ರೀನಿವಾಸ ಪೂಜಾರಿ ಬಿಟ್ಟರೆ ಬೇರೆ ಯಾವ ಸಚಿವರೂ ಸರಿ ಇಲ್ಲ: ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ

spot_img
- Advertisement -
- Advertisement -

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಒಬ್ಬರನ್ನು ಬಿಟ್ಟರೆ ಬೇರೆ ಯಾವ ಸಚಿವರೂ ಸರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಜೆಡಿಎಸ್ ಮುಖ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಎಲ್ಲರೂ ದುಡ್ಡಿನ ದಂಧೆ ಮಾಡಲು‌ ಬಾಗಿಲು ತೆಗೆದುಕೊಂಡು ಕೂತಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ. ಸಚಿವ ಎಂಟಿಬಿ ನಾಗರಾಜ್ ಯಾಕೆ ಹಾಗೆ ಹೇಳಿದರು? ಅದರ ಹಿಂದೆ ಏನೆಲ್ಲಾ ನಡೆದಿದೆ ಎನ್ನುವುದು ನನಗೆ ಎಲ್ಲವೂ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೆ.ಆರ್. ಪುರಂ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ನಂದೀಶ್ 80 ಲಕ್ಷ ರೂಪಾಯಿ ಕೊಟ್ಟು ಮೂರು ತಿಂಗಳು ಆಗಿರಲಿಲ್ಲ. ಅಷ್ಟರಲ್ಲಿ ಅವರನ್ನು ಅಮಾನತು ಮಾಡಿದರು. ಅದರ ನೋವಿನಲ್ಲಿ ನಂದೀಶ್ ಗೆ ಹೃದಯಾಘಾತ ಆಗಿರಬಹುದು. ಅಲ್ಲಿನ ಶಾಸಕರಿಗೆ ಎಷ್ಟು ಹೋಗಿದೆ, ಯಾರ್ಯಾರಿಗೆ ಎಷ್ಟು ಹೋಗಿದೆ. ಎಲ್ಲವೂ ತನಿಖೆ ಮಾಡಿದ್ರೆ ಹೊರಬರಲಿದೆ ಎಂದು ಕುಮಾರಸ್ವಾಮಿ ತನಿಖೆಗೆ ಒತ್ತಾಯಿಸಿದ್ದಾರೆ.

ಇನ್ನು ಕೆಲವು ಸಚಿವರು ಎಷ್ಟೇ ಶ್ರೀಮಂತರಿದ್ದರೂ ಅವರಿಗೆ ಹಣದ ದಾಹ ಕಡಿಮೆಯಾಗಿಲ್ಲ. ಎಷ್ಟು ಸಾಧ್ಯವೋ ಅಷ್ಟನ್ನೂ ಗೋರುತ್ತಿದ್ದಾರೆ. ಈ ಸರಕಾರದಲ್ಲಿ ಕೈನಲ್ಲಿ‌ ಹಣ ಬಾಚುತ್ತಿಲ್ಲ, ಜೆಸಿಬಿಯಲ್ಲಿ, ಹಿಟಾಚಿಯಲ್ಲಿ ಬಾಚುತ್ತಿದ್ದಾರೆ ಎಂದು ಆರೋಪಿಸಿದ ಹೆಚ್ ಡಿಕೆ, ಆದೇನು
ತನಿಖೆ ಮಾಡುತ್ತಾರೋ ನೋಡೋಣ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -
spot_img

Latest News

error: Content is protected !!