Sunday, June 7, 2026
Homeಕರಾವಳಿಮಂಜೇಶ್ವರದಲ್ಲಿ ಲಾರಿ-ಸ್ಕೂಟರ್ ಅಪಘಾತ: ಬೆಳ್ತಂಗಡಿಯ ನಿವೃತ್ತ ಸೈನಿಕ ಸಾವು

ಮಂಜೇಶ್ವರದಲ್ಲಿ ಲಾರಿ-ಸ್ಕೂಟರ್ ಅಪಘಾತ: ಬೆಳ್ತಂಗಡಿಯ ನಿವೃತ್ತ ಸೈನಿಕ ಸಾವು

- Advertisement -
- Advertisement -

ಬೆಳ್ತಂಗಡಿ : ಕೇರಳ ರಾಜ್ಯದ ಮಂಜೇಶ್ವದಲ್ಲಿ ನಡೆದ ಲಾರಿ – ಸ್ಕೂಟರ್ ನಡೆದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಕಾನರ್ಪ ನಿವಾಸಿ ನಿವೃತ್ತ ಸೈನಿಕ ದಿನೇಶ್(41) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ಘಟನೆ ವಿವರ:
ಬೆಳ್ತಂಗಡಿ ತಾಲೂಕಿನ ಕಾರ್ನಪ ನಿವಾಸಿ ನಿವೃತ್ತ ಅರಣ್ಯರಕ್ಷಕ ದಮೋದರ ಅವರ ಮಗನಾದ ಮಾಜಿ ಸೈನಿಕ ದಿನೇಶ್(41) ಸೇನೆಯಲ್ಲಿ 18 ವರ್ಷ ದೇಶಸೇವೆ ಮಾಡಿ ನಿವೃತ್ತಿಹೊಂದಿದ್ದು ನಂತರ ಮಂಗಳೂರು ಕಾವೂರಿನ ಖಾಸಗಿ ಸಂಸ್ಥೆಯೊಂದರಲ್ಲಿ
ಸೆಕ್ಯೂರಿಟಿ ಗಾರ್ಡ್ ಅಗಿ ಕೆಲಸ ಮಾಡುತ್ತಿದ್ದರು.

ಇವರ ಪತ್ನಿ ಮನೆ ಕೇರಳ ರಾಜ್ಯದ ಮಂಜೇಶ್ವರದಲ್ಲಿದ್ದು, ಅಲ್ಲಿಯೇ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೊತೆ ವಾಸವಾಗಿದ್ದರು. ಪ್ರತಿನಿತ್ಯ ಪತ್ನಿ ಮನೆಯಿಂದ ಮಂಗಳೂರಿಗೆ ಸ್ಕೂಟರಿನಲ್ಲಿ ಹೋಗುತ್ತಿದ್ದರು. ಅದರಂತೆ ಇಂದು ಬೆಳಗ್ಗೆ ಮಂಜೇಶ್ವರದಿಂದ ಮಂಗಳೂರಿಗೆ ದಿನೇಶ್ ಸ್ಕೂಟರಿನಲ್ಲಿಯೇ ಹೊರಟಿದ್ದು, ಅವರ ಜೊತೆಯಲ್ಲಿ ಹಿಂಬದಿ ಸವಾರ ಯತೀಶ್ ಇದ್ದರು.

ಮಂಜೇಶ್ವರ-ಮಂಗಳೂರು ಮಾರ್ಗದಲ್ಲಿ ಕೇರಳ ಭಾಗದಿಂದ ಅತಿ ವೇಗದಲ್ಲಿ ಬರುತ್ತಿದ್ದ ಲಾರಿ ಸ್ಕೂಟರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಅದೆ ಲಾರಿಯ ಹಿಂದಿನ ಚಕ್ರಕ್ಕೆ ತಲೆ ಸಿಲುಕಿ ಸಂಪೂರ್ಣ ಜಜ್ಜಿ ಹೋಗಿದ್ದು, ಸ್ಥಳದಲ್ಲೇ ದಿನೇಶ್ ಸಾವನ್ನಪಿದ್ದಾರೆ.

ಸಹಸವಾರ ಯತೀಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಡಿಕ್ಕಿ ಹೊಡೆದ ಲಾರಿ ಪರಾರಿಯಾಗಿದ್ದು, ಘಟನೆ ಸಂಬಂಧ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!