Thursday, June 4, 2026
Homeಕರಾವಳಿಬೆಳ್ತಂಗಡಿ : ಚುನಾವಣೆಗೆ ಆಗಮಿಸಿದ ಇವಿಎಮ್ ಮೆಷಿನ್:ಬಿಗಿ ಭದ್ರತೆಯಲ್ಲಿ ಕಂಟೇನರ್ ನಲ್ಲಿ ಉಜಿರೆಗೆ ಆಗಮಿಸಿದ ಇವಿಎಮ್

ಬೆಳ್ತಂಗಡಿ : ಚುನಾವಣೆಗೆ ಆಗಮಿಸಿದ ಇವಿಎಮ್ ಮೆಷಿನ್:ಬಿಗಿ ಭದ್ರತೆಯಲ್ಲಿ ಕಂಟೇನರ್ ನಲ್ಲಿ ಉಜಿರೆಗೆ ಆಗಮಿಸಿದ ಇವಿಎಮ್

- Advertisement -
- Advertisement -

ಬೆಳ್ತಂಗಡಿ : ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣೆಗೆ ಬೇಕಾದ ಪರಿಕರಗಳು ಬರುತ್ತಿದ್ದು.‌ ಉಜಿರೆಗೆ ಕಂಟೇನರ್ ಮೂಲಕ ಇವಿಎಮ್ ಮೆಷಿನ್ ಆಗಮಿಸಿದ್ದು ಸ್ಟ್ರಾಂಗ್ ರೂಂ ನಲ್ಲಿ ಭದ್ರವಾಗಿಡಲಾಗಿದೆ.

ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಸ್ಟ್ರಾಂಗ್ ರೂಂನಲ್ಲಿದ್ದ ಇವಿಎಮ್ ಮೇಷಿನ್ ಎ.6 ರಂದು ಸಂಜೆ ಮಂಗಳೂರಿನಿಂದ ಬಿಗಿ ಭದ್ರತೆಯಲ್ಲಿ ಕಂಟೇನರ್ ಲಾರಿ ಮೂಲಕ 290 ಬ್ಯಾಲೆಟ್ ಯೂನಿಟ್ , 290 ಕಂಟ್ರೋಲ್ ಯೂನಿಟ್, 314 ಇವಿ ಪ್ಯಾಟ್ ಉಜಿರೆ ಎಸ್.ಡಿ.ಎಮ್ ಪಿಯು ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಂಗೆ ತರಲಾಗಿದೆ.

ಉಜಿರೆ ಎಸ್.ಡಿ.ಎಮ್ ನ ಪಿಯುಸಿ ಕಾಲೇಜಿನ ಎರಡು ಕೊಠಡಿಗಳನ್ನು ಚುನಾವಣಾ ಸ್ಟ್ರಾಂಗ್ ರೂಂ ಅಗಿ ಮಾಡಲಾಗಿದ್ದು. ಇದಕ್ಕೆ ಪೊಲೀಸರು ಭದ್ರತೆ ವಹಿಸಲಿದ್ದಾರೆ.ಚುನಾವಣಾಧಿಕಾರಿ ಸುರೇಶ್ ಕುಮಾರ್.ಟಿ , ಇವಿಎಮ್ ನೋಡಲ್ ಅಧಿಕಾರಿ ಗಣೇಶ್ ರಾಮಚಂದ್ರ ಭಟ್, ಚುನಾವಣಾ ಶಾಲೆಯ ಅಮಿನ್ ರಂಗತ್ ಮಲೆ,ಎ.ಡಿ‌.ಎಲ್.ಆರ್ ಅಧಿಕಾರಿ ರೇಣುಕಾ ನಾಯ್ಕ್, ಪುಂಜಾಲಕಟ್ಟೆ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಇವಿಎಮ್ ಮೇಷಿನ್ ತರಲಾಯಿತು..

- Advertisement -

Latest News

error: Content is protected !!