Thursday, June 4, 2026
Homeಕರಾವಳಿಮಂಗಳೂರು : ಉಳ್ಳಾಲದಲ್ಲಿ ಸಿಆರ್ ಪಿಎಫ್ ಸಿಬ್ಬಂದಿಯ ಪಥ ಸಂಚಲನ

ಮಂಗಳೂರು : ಉಳ್ಳಾಲದಲ್ಲಿ ಸಿಆರ್ ಪಿಎಫ್ ಸಿಬ್ಬಂದಿಯ ಪಥ ಸಂಚಲನ

- Advertisement -
- Advertisement -

ಮಂಗಳೂರು : ವಿಧಾನಸಭಾ ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಕೋಮು ಸೂಕ್ಷ್ಮ ಮತ್ತು ಅಂತರಾಜ್ಯ ಗಡಿ ಪ್ರದೇಶವಾಗಿರುವ ಉಳ್ಳಾಲದಲ್ಲಿ ಸಿಆರ್ ಪಿಎಫ್ ಸಿಬ್ಬಂದಿಯ ಪಥ ಸಂಚಲನ ನಡೆಯಿತು.

ಜನರಲ್ಲಿ ಧೈರ್ಯ ತುಂಬಲು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಿಂದ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆವರೆಗೆ ಸಿಆರ್ ಪಿಎಫ್ , ಉಳ್ಳಾಲ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹಾಗೂ ಕೆಎಸ್ ಆರ್ ಪಿ ಅಸೈಗೋಳಿ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.
ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್ , ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾಧಿಕಾರಿ ರಮೇಶ್ ಹಾನಾಪುರ ಹಾಗೂ ಸಿಆರ್ ಪಿಎಫ್ ಸುಬೇದಾರ್ ಎಂ.ಪಿ ಸಿಂಗ್ ಅವರುಗಳು ಪಥಸಂಚಲನದ ನೇತೃತ್ವ ವಹಿಸಿದ್ದರು.

- Advertisement -

Latest News

error: Content is protected !!