ಬೆಳ್ತಂಗಡಿ: ಪ್ರಚಲಿತ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಡುತ್ತಿದ್ದು ನೂತನ ವಾಹನ ಸವಾರರಿಗೆ ಹೊಸ ರೀತಿಯ ಸವಾರಿಯ ಅನುಭವವನ್ನು ನೀಡುತ್ತಿದೆ.

ಈ ನೂತನ ತಂತ್ರಜ್ಞಾನದ ವಿಷಯದಲ್ಲಿ ನಮ್ಮ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು, ಎಲೆಕ್ಟ್ರಿಕ್ ವಾಹನಗಳ ಕುರಿತಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಲು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
ಆಸಕ್ತ ಪ್ರೌಢ ಶಾಲಾ ವಿದ್ಯಾರ್ಥಿ/ ವಿದ್ಯಾರ್ಥಿನೀಯರು ಭಾಗವಹಿಸಿ ಈ ಸ್ಪರ್ಧೆಯನ್ನು ಯಶಸ್ವೀಗೊಳಿಸಬೇಕಾಗಿ ಕಾಲೇಜಿನ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.
ಭಾಗವಹಿಸುವವರಿಗೆ ವಿಶೇಷ ಸೂಚನೆ:
•ಭಾಗವಹಿಸುವ ವಿದ್ಯಾರ್ಥಿ/ ವಿದ್ಯಾರ್ಥಿನೀಯರು ತಾವು ಬರೆದ ಪ್ರಬಂಧವನ್ನು, ನಿಮ್ಮ ಶಾಲೆಯ ಮುಖ್ಯೋಪಾಧ್ಯಯರ ಸಹಿ ಮತ್ತು ಶಾಲೆಯ ಮೊಹರಿನ ಜೊತೆ ಫೋಟೋ ತೆಗೆದು ಅಥವಾ PDF ಮಾಡಿ [email protected] ಗೆ ದಿನಾಂಕ 25-02-2022 ರ ಒಳಗೆ ಕಳುಹಿಸಬಹುದಾಗಿದೆ.
•ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವಿದ್ಯನ್ಮಾನ ಮತ್ತು ಸಂವಹನ ವಿಭಾಗವನ್ನು ಸಂಪರ್ಕಿಸುವಂತೆ ವಿನಂತಿ.
•9480053544,7624838196,9535223701,9844667993


