Sunday, June 7, 2026
Homeತಾಜಾ ಸುದ್ದಿಕಡಬ: ಮನೆ ಮಂದಿ ಮಲಗಿದ್ದ ವೇಳೆ ಹಿಂಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರು

ಕಡಬ: ಮನೆ ಮಂದಿ ಮಲಗಿದ್ದ ವೇಳೆ ಹಿಂಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರು

- Advertisement -
- Advertisement -

ಕಡಬ: ಮನೆ ಮಂದಿ ಮಲಗಿದ್ದ ವೇಳೆ ಹಿಂಬಾಗಿಲ ಮೂಲಕ ಒಳನುಗ್ಗಿದ ಕಳ್ಳರು ನಗದು ಸಹಿತ ಹಲವು ಸೊತ್ತುಗಳನ್ನು ಎಗರಿಸಿದ ಘಟನೆ ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಫೆ .22 ರ ಮಂಗಳವಾರ ನಸುಕಿನಲ್ಲಿ ನಡೆದಿದೆ.

ಪಾಲೆತ್ತಡ್ಕದ ಬಾಲಕೃಷ್ಣ ಶೆಟ್ಟಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಳವಾದ ವಸ್ತುಗಳ ಒಟ್ಟು ಮೊತ್ತ 66.000 ರೂ ಎಂದು ಅಂದಾಜಿಸಲಾಗಿದೆ.

ರಾತ್ರಿ ಊಟ ಮಲಗಿದ ಬಳಿಕ ಯಾರೋ ಕಳ್ಳರು ಮನೆಯ ಹಿಂಬಾಗಿಲ ಬಾಗಿಲನ್ನು ಬಲತ್ಕಾರವಾಗಿ ತಳ್ಳಿ ಮನೆಯ ಒಳ ಪ್ರವೇಶಿಸಿ ಇಟ್ಟಿದ್ದ 35,000 ರೂ ನಗದು, ಸೆಲ್ಪ್ ನಲ್ಲಿ ಇರಿಸಿದ್ದ ನಗದು ರೂ 30,000 ಸಾವಿರ, 1000 ರೂ ಬೆಳ್ಳಿಯ ಚೈನ್‌ ಮತ್ತು ಮಗ ಬಳಸುತ್ತಿದ್ದ ಯುಕೋ ಬ್ಯಾಂಕಿನ ಎಟಿಎಂ ಕಾರ್ಡ್‌ ಕಳ್ಳತನವಾಗಿದೆ ಎಂದು ದೂರು ನೀಡಿದ್ದು, ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!