Friday, June 26, 2026
Homeತಾಜಾ ಸುದ್ದಿಬಾಂಗ್ಲಾದ ಹಿಂದೂಗಳ ಸ್ಥಿತಿಗೆ ಈಶ್ವರಪ್ಪ ಆಕ್ರೋಶ; ಅನ್ನ ತಿಂದ ಮನೆಗೆ ಕನ್ನ ಹಾಕುವವರು ಮುಸ್ಲಿಮರು

ಬಾಂಗ್ಲಾದ ಹಿಂದೂಗಳ ಸ್ಥಿತಿಗೆ ಈಶ್ವರಪ್ಪ ಆಕ್ರೋಶ; ಅನ್ನ ತಿಂದ ಮನೆಗೆ ಕನ್ನ ಹಾಕುವವರು ಮುಸ್ಲಿಮರು

- Advertisement -
- Advertisement -

ಶಿವಮೊಗ್ಗ: ಬಾಂಗ್ಲಾದೇಶದಲ್ಲಿ ಇಸ್ಕಾನ್ ಸದಸ್ಯರು ಮೇಲೆ ಹಲ್ಲೆಯಾಗುತ್ತಿದ್ದು, ಬಂಧನವಾದ ಚಿನ್ಮಯ್ ದಾಸ್ ಪರವಾಗಿ ಒಬ್ಬರು ವಕೀಲರು ವಕಾಲತ್ತು ಹಾಕಲು ಹೊರಟ್ಟಿದ್ದರು. ಆದರೆ ಮುಸ್ಲಿಮರು ಆ ವಕೀಲರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿನ ಪರಿಸ್ಥಿತಿ ನೋಡಿದ್ರೆ ಮುಸ್ಲಿಮರು ಅನ್ನ ತಿಂದ ಮನೆಗೆ ಕನ್ನ ಹಾಕುವವರು ಎಂಬುದು ಗೊತ್ತಾಗುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಅವರು ನಗರದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಹಿತರಕ್ಷಣಾ ಸಮಿತಿಯ ಪ್ರತಿಭಟನಾ ಸಭೆಯಲ್ಲಿ ಈ ಕುರಿತಂತೆ ಮಾತನಾಡಿ, ‘ಬಾಂಗ್ಲಾದೇಶದ ಮುಸ್ಲಿಂಮರಿಗೆ ಚಿನ್ಮಯ್ ದಾಸ್ ಅನ್ನ ಹಾಕುತ್ತಿದ್ದರು. ಆ ವೇಳೆ ಬಾಂಗ್ಲಾದೇಶಕ್ಕೆ ತಿನ್ನಲು ಅನ್ನ ಇರಲಿಲ್ಲ. ಆದರೆ ಇದೀಗ ಅವರು ಮಾಡಿದ ಉಪಕಾರವನ್ನು ಮರೆತು ಅನ್ನ ಹಾಕಿದ ಮನೆಗೆ ಕನ್ನ ಹಾಕುವ ಕೆಲಸವನ್ನು ಮುಸ್ಲಿಂಮರು ಮಾಡುತ್ತಿದ್ದಾರೆ. ಭಾರತದ ಹಿಂದೂಗಳು ಶಾಂತಿಪ್ರಿಯರು. ಇದುವರೆಗೂ ಒಬ್ಬ ಹಿಂದೂ ಆಗಲಿ ಬಾಬ್ರಿ ಮಸೀದಿಯನ್ನು ಬಿಟ್ಟು ಬೇರೆ ಯಾವ ಮಸೀದಿಯನ್ನು ಧ್ವಂಸ ಮಾಡಲು ಹೋಗಿಲ್ಲ. ಅದು ರಾಮನ ಮಂದಿರ ನಿರ್ಮಾಣಕ್ಕಾಗಿ ಹಿಂದೂಗಳು ಮಾಡಿದ ಕಾರ್ಯವಾಗಿತ್ತು,’ ಎಂದರು.

‘ಇನ್ನು ಮುಸ್ಲಿಮರು ಹಿಂದೂ ಯುವತಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ನಮ್ಮ ದೇಶದ ಹಿಂದೂಗಳು ಇಲ್ಲಿನ ಮುಸ್ಲಿಮರಿಗೆ ಸಿಕ್ಕ ಸಿಕ್ಕ ಕಡೆ ಹೊಡೆದರೆ ಮುಸ್ಲಿಮರು ಉಳಿಯುತ್ತಾರಾ?. ಇವತ್ತೂ ಸಹ ಬಾಂಗ್ಲದಲ್ಲಿ ಹಿಂದೂ ದೇವಸ್ಥಾನ ಧ್ವಂಸ ಮಾಡಿದ್ದಾರೆ. ಇದೇ ರೀತಿ ಮುಂದುವರೆದರೆ ಬಾಂಗ್ಲಾದೇಶ, ಪಾಕಿಸ್ತಾನ ಮುಂದೊಂದು ದಿನ ಇರಲ್ಲ. ಅದು ಅಖಂಡ ಭಾರತವಾಗಿ ಪರಿವರ್ತನೆಯಾಗುತ್ತದೆ,’ ಎಂದು ತಿಳಿಸಿದರು. 

- Advertisement -

Latest News

error: Content is protected !!