Thursday, June 25, 2026
Homeಕರಾವಳಿಮಂಗಳೂರುಡಿಸೆಂಬರ್ 20 ಕ್ಕೆ ಉಪೇಂದ್ರ ಅಭಿನಯ UI ಸಿನಿಮಾ ರಿಲೀಸ್ ಹಿನ್ನೆಲೆ; ಚಿತ್ರತಂಡದೊಂದಿಗೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ...

ಡಿಸೆಂಬರ್ 20 ಕ್ಕೆ ಉಪೇಂದ್ರ ಅಭಿನಯ UI ಸಿನಿಮಾ ರಿಲೀಸ್ ಹಿನ್ನೆಲೆ; ಚಿತ್ರತಂಡದೊಂದಿಗೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಉಪ್ಪಿ ಭೇಟಿ

- Advertisement -
- Advertisement -

ಬೆಂಗಳೂರು; ಡಿಸೆಂಬರ್ 20 ಕ್ಕೆ ಉಪೇಂದ್ರ ಅಭಿನಯ UI ಸಿನಿಮಾ ರಿಲೀಸ್ ಹಿನ್ನೆಲೆ ಉಪ್ಪಿ ಚಿತ್ರತಂಡದೊಂದಿಗೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಈ ವೇಳೆ ದೇಗುಲದ  ವತಿಯಿಂದ ಉಪ್ರೇಂದ್ರ ಅವರನ್ನು ಗೌರವಿಸಲಾಯಿತು. ದೇವಳದ ಕಾರ್ಯವೈಖರಿ, ಶಿಕ್ಷಣ ಸಂಸ್ಥೆ ಮತ್ತಿತರ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ನಂತರ ಕ್ಯಾಪ್ಸ್ ಫೌಂಡೇಶನ್ ನ ಕಾಟನ್ ಬ್ಯಾಗ್ ನ್ನು ಅಭಿಮಾನಿಗಳಿಗೆ ವಿತರಿಸಿ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು. ಕ್ಯಾಪ್ಸ್ ಫೌಂಡೇಷನ್‌ ನ ಸಮಾಜ‌ಮುಖಿ ಕೆಲಸಗಳ ಬಗ್ಗೆ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪೇಂದ್ರ ಜೊತೆ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಲಹರಿ ವೇಲು ಹಾಗೂ ನವೀನ್ ಮನೋಹರನ್ ಕೂಡ ದೇವರ ದರ್ಶನ ಪಡೆದರು. ಇದೇ ವೇಳೆ ಉಪೇಂದ್ರ ಜೊತೆಗಿನ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದರು. ಬಳಿಕ ಕೊರಗಜ್ಜದ ದರ್ಶನ ಪಡೆದುಕೊಂಡು ಸಂಜೆ ಮಂಗಳೂರಿನಲ್ಲಿ UI ಸಿನೆಮಾದ ಬಗ್ಗೆ ಉಪೇಂದ್ರ ಅವರು ಸುದ್ದಿಗೋಷ್ಟಿ ನಡೆಸಿದರು.

- Advertisement -

Latest News

error: Content is protected !!