Thursday, June 4, 2026
Homeಕರಾವಳಿಉಡುಪಿಬಿಜೆಪಿ ಟಿಕೆಟ್ ವಿಚಾರವಾಗಿ ರಘುಪತಿ ಭಟ್ ಗೆ ಮಾತು ಕೊಡಲಿಲ್ಲ ಎಂದು ಅಪ್ಪ ಮಕ್ಕಳು ಕೃಷ್ಣನ...

ಬಿಜೆಪಿ ಟಿಕೆಟ್ ವಿಚಾರವಾಗಿ ರಘುಪತಿ ಭಟ್ ಗೆ ಮಾತು ಕೊಡಲಿಲ್ಲ ಎಂದು ಅಪ್ಪ ಮಕ್ಕಳು ಕೃಷ್ಣನ ಮುಂದೆ ಪ್ರಮಾಣ ಮಾಡಲಿ; ಮಾಜಿ ಸಿಎಂ ಬಿಎಸ್ ವೈ ಕುಟುಂಬಕ್ಕೆ ಉಡುಪಿಯಲ್ಲಿ ಕೆ.ಎಸ್. ಈಶ್ವರಪ್ಪ ಸವಾಲು

- Advertisement -
- Advertisement -

ಉಡುಪಿ: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್ ವಿಚಾರವಾಗಿ ರಘುಪತಿ ಭಟ್ ಗೆ ಮಾತು ಕೊಡಲಿಲ್ಲ ಎಂದು ಅಪ್ಪ ಮಕ್ಕಳು ಬಂದು ಕೃಷ್ಣನ ಮುಂದೆ ಪ್ರಮಾಣ ಮಾಡಲಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸವಾಲು ಹಾಕಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಲೋಕಸಭಾ ಚುನಾವಣೆಯಲ್ಲಿ ರಘುಪತಿ ಭಟ್ ಗೆ ಶಿವಮೊಗ್ಗ ಉಸ್ತುವಾರಿ ಕೊಟ್ಟು 42 ದಿನ ಶಿವಮೊಗ್ಗದ ಹಳ್ಳಿ ಹಳ್ಳಿಯಲ್ಲಿ ಭಟ್ಟರನ್ನು ಸುತ್ತಿಸಿ ಪ್ರಚಾರ ಮಾಡಿಸಿದರು ಎಂದು ಹೇಳಿದ್ದಾರೆ.

ಅಲ್ಲದೇ, ರಘುಪತಿ ಭಟ್ ಹೆಂಡತಿ ಮಕ್ಕಳನ್ನು ಬಿಟ್ಟು ರಾತ್ರಿ ಹಗಲು ಬಿಜೆಪಿಗೆ ಪ್ರಚಾರ ಮಾಡಿದರು ಎಂದು ಹೇಳಿದ ಈಶ್ವರಪ್ಪ, ನಿಮಗೇ ಪರಿಷತ್ ಟಿಕೆಟ್ ಎಂದು ನಂಬಿಸಿ ಕೆಲಸ ಮಾಡಿಸಿದರು ಎಂದು ಆರೋಪಿಸಿದ್ದಾರೆ.

ಜಾತಿ ಮತ್ತು ಹಣ ಬಲದಿಂದ ಬಿಜೆಪಿ ಟಿಕೆಟ್ ಡಾ. ಧನಂಜಯ ಸರ್ಜಿ ಪಾಲಾಯಿತು ಎಂದು ಹೇಳಿರುವ ಈಶ್ವರಪ್ಪ,
ಪಕ್ಷ ನಿಷ್ಠೆಯಲ್ಲಿ ಧನಂಜಯ ಸರ್ಜಿಗೆ ರಘುಪತಿ ಭಟ್ ಅವರ ಎಡಗಾಲಿನಷ್ಟೂ ಬೆಲೆ ಇಲ್ಲ ಎಂದಿದ್ದಾರೆ.

- Advertisement -

Latest News

error: Content is protected !!