Monday, June 8, 2026
Homeಕರಾವಳಿಮಂಗಳೂರು: ನಿಶ್ಚಿತಾರ್ಥವಾಗಿದ್ದ ಹಿಂದೂ ಯುವತಿ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿರುವ ಶಂಕೆ; ಮದುವೆಗಾಗಿ ಖರೀದಿಸಿದ್ದ ಬಂಗಾರದೊಂದಿಗೆ ನಾಪತ್ತೆ!

ಮಂಗಳೂರು: ನಿಶ್ಚಿತಾರ್ಥವಾಗಿದ್ದ ಹಿಂದೂ ಯುವತಿ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿರುವ ಶಂಕೆ; ಮದುವೆಗಾಗಿ ಖರೀದಿಸಿದ್ದ ಬಂಗಾರದೊಂದಿಗೆ ನಾಪತ್ತೆ!

- Advertisement -
- Advertisement -

ಮಂಗಳೂರು:ನಗರದ ಬಳ್ಳಾಲ್‌ ಬಾಗ್‌ನ ಅಪಾರ್ಟ್‌ಮೆಂಟೊಂದರಲ್ಲಿ ವಾಸವಿದ್ದ, ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ ಮತ್ತು ಹಣವನ್ನು ಕದ್ದುಕೊಂಡು ಹೋಗಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಗದಗದ ನಿವಾಸಿಗಳಾಗಿರುವ ಇವರು, ಬರ್ಕೆ ಪೊಲೀಸ್‌ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಚ್‌ಮನ್‌ ಆಗಿ ಕೆಲಸ ಮಾಡುತ್ತೀದ್ದ ಯಶೋಧಾ ಅವರ ಪುತ್ರಿ ರೇಶ್ಮಾ (21) ಅವರ ನಿಶ್ಚಿತಾರ್ಥ ಆ.21ರಂದು ನಡೆದಿತ್ತು.

ನಿಶ್ಚಿತಾರ್ಥ ಸಂದರ್ಭ ಹುಡುಗನ ಮನೆಯವರು 1 ಲಕ್ಷ ರೂ. ಮೌಲ್ಯದ ಚಿನ್ನದ ಸರ, 50 ಸಾವಿರ ರೂ. ಮೌಲ್ಯದ ಉಂಗುರ, 60 ಸಾವಿರ ರೂ. ಮೌಲ್ಯದ ಕಿವಿಯೋಲೆ, ಕಾಲು ಗೆಜ್ಜೆ ತೆಗೆದುಕೊಂಡು ಹೋಗಿದ್ದಾಳೆ. ಅಲ್ಲದೆ ಕೂಲಿ ಕೆಲಸ ಮಾಡಿ ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಮಾಡಿದ್ದ 90 ಸಾವಿರ ರೂ. ಹಣವನ್ನು ಅಕ್ಬರ್‌ ಆಲಿ ಎನ್ನುವವನ ಖಾತೆಗೆ ವರ್ಗಾಯಿಸಿದ್ದಾಳೆ ಎಂದು ಹೇಳಲಾಗಿದೆ. ಈಕೆಯನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!