Saturday, May 4, 2024
Homeಕರಾವಳಿಗಣೇಶೋತ್ಸವ : ರಾಜ್ಯಕ್ಕೆ ಒಂದೇ ನಿಯಮ; ದ.ಕ ಜಿಲ್ಲೆಗೆ ಹೆಚ್ಚುವರಿ ನಿರ್ಬಂಧಗಳಿಲ್ಲ!

ಗಣೇಶೋತ್ಸವ : ರಾಜ್ಯಕ್ಕೆ ಒಂದೇ ನಿಯಮ; ದ.ಕ ಜಿಲ್ಲೆಗೆ ಹೆಚ್ಚುವರಿ ನಿರ್ಬಂಧಗಳಿಲ್ಲ!

spot_img
- Advertisement -
- Advertisement -

ಮಂಗಳೂರು: ರಾಜ್ಯ ಸರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ನೀಡಿದ್ದ ಷರತ್ತುಬದ್ಧ ಅನುಮತಿಯೇ ದಕ್ಷಿಣ ಕನ್ನಡ ಜಿಲ್ಲೆಗೂ ಅನ್ವಯವಾಗುತ್ತದೆ ಹಾಗೂ ಯಾವುದೇ ಹೆಚ್ಚುವರಿ ನಿರ್ಬಂಧಗಳಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಒಮ್ಮೆಗೆ 20 ಮಂದಿಗಿಂತ ಹೆಚ್ಚು ಜನರು ಸೇರಬಾರದು, ಆಯೋಜಕರು ಕೊರೊನಾ ನೆಗೆಟಿವ್‌ ವರದಿ, ಲಸಿಕೆ ಪಡೆದಿರುವ ಪ್ರಮಾಣಪತ್ರ ಹೊಂದಿರಬೇಕು. ಸರಳ ರೀತಿಯಲ್ಲಿ ಮನೆ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ಜನರೊಂದಿಗೆ ಚೌತಿ ಆಚರಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಗರಿಷ್ಠ 5 ದಿನಗಳವರೆಗೆ ಮಾತ್ರ ಆಚರಿಸಲು ಅನುಮತಿ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪನೆ ಮಾಡಬೇಕು. ಗಣೇಶ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ, ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಪಡೆಯ ಬೇಕು.


ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಮುಖ್ಯವಾಗಿ ಡಿಜೆ ಮೂಲಕ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ.ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕೂ ಯಾವುದೇ ಮೆರವಣಿಗೆ ನಡೆಸುವಂತಿಲ್ಲ. ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಹೀಗೆ ಹಲವು ಷರತ್ತುಗಳೊಂದಿಗೆ ಗಣೇಶ ಹಬ್ಬ ಆಚರಿಸಲು ಸರಕಾರ ಅನುಮತಿ ನೀಡಿದೆ. ದ.ಕ. ಜಿಲ್ಲೆಗೂ ಇದೇ ಆದೇಶ ಅನ್ವಯವಾಗಲಿದೆ.

- Advertisement -
spot_img

Latest News

error: Content is protected !!