Saturday, May 18, 2024
Homeಜ್ಯೋತಿಷ್ಯಬುಧವಾರದ ರಾಶಿಫಲ: ಇಂದು ಯಾವ ರಾಶಿಯವರಿಗೆ ಅನಿರೀಕ್ಷಿತ ಧನಲಾಭ ಸಾಧ್ಯತೆ

ಬುಧವಾರದ ರಾಶಿಫಲ: ಇಂದು ಯಾವ ರಾಶಿಯವರಿಗೆ ಅನಿರೀಕ್ಷಿತ ಧನಲಾಭ ಸಾಧ್ಯತೆ

spot_img
- Advertisement -
- Advertisement -

ಮೇಷ: ಆರೋಗ್ಯ ಸಮಸ್ಯೆ ಬಿಗಡಾಯಿಸಬಹುದು . ಅನಗತ್ಯ ತಿರುಗಾಟ. ಆಸ್ತಿ ವಿಚಾರಕ್ಕೆ ಸ್ನೇಹಿತನಿಂದ ಸಲಹೆ. ಶುಭಸಂಖ್ಯೆ: 5

ವೃಷಭ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ದೃಢನಿರ್ಧಾರವನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಬಿಗುವಿನ ವಾತಾವರಣ. ಶುಭಸಂಖ್ಯೆ: 2

ಮಿಥುನ: ಹಿರಿಯರ ಅನಾರೋಗ್ಯ. ಸಹೋದ್ಯೋಗಿಗಳಿಂದ ಅಪಪ್ರಚಾರ. ಕೆಲಸಕಾರ್ಯಗಳಲ್ಲಿ ಅಪಜಯ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7

ಕಟಕ: ಆತ್ಮೀಯ ಬಂಧುಗಳ ಭೆೇಟಿ. ಹಿತೈಷಿಗಳಿಂದ ಆಸ್ತಿ ವಿಚಾರದಲ್ಲಿ ಸಲಹೆ. ಅನಾರೋಗ್ಯ ಭಾಧಿಸಬಹದು. ಶುಭಸಂಖ್ಯೆ: 6

ಸಿಂಹ: ಎಷ್ಟೋ ಕಾಲದಿಂದ ತೊಂದರೆ ಕೊಡುತ್ತಿದ್ದ ವ್ಯಾಧಿ ಉಪಶಮನ. ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ. ಶುಭಸಂಖ್ಯೆ: 4

ನ್ಯಾ: ಮಾನಸಿಕ ಚಾಂಚಲ್ಯ. ನಿಯಂತ್ರಿಸಿ. ನಟನಾ ವೃತ್ತಿಯವರಿಗೆ ಒಳ್ಳೆಯ ದಿನ. ಕಲಾಕ್ಷೇತ್ರದವರಿಗೆ ಉತ್ತಮ ಫಲ. ಶುಭಸಂಖ್ಯೆ: 4

ತುಲಾ: ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಉದ್ಯೋಗದ ವಿಚಾರದಲ್ಲಿ ಸ್ಥಾನಮಾನದ ನಿರೀಕ್ಷೆ ಸಫಲ. ದಿನಾಂತ್ಯದಲ್ಲಿ ಸಿಹಿ. ಶುಭಸಂಖ್ಯೆ: 2

ವೃಶ್ಚಿಕ: ಹಿತಶತ್ರುಗಳ ಕಾಟ. ಆಸ್ತಿ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ. ಶುಭಸಂಖ್ಯೆ:3

ನುಸ್ಸು: ಪ್ರಮುಖ ವಿಚಾರದಲ್ಲಿ ಕುಟುಂಬದಲ್ಲಿ ಗೊಂದಲ. ಯಾರೋ ಮಾಡಿದ ತಪ್ಪಿಗೆ ನೀವು ಬಲಿಯಾಗಬಹುದು. ಎಚ್ಚರವಾಗಿರಿ. ಶುಭಸಂಖ್ಯೆ: 7

ಮಕರ: ಸ್ಥಾನಮಾನದ ನಷ್ಟ. ಆತ್ಮೀಯ ಸ್ನೇಹಿತನ ಭೆೇಟಿ. ಮಾತಿನಿಂದ ಶತ್ರುಗಳ ಸೃಷ್ಟಿಯಾಗಬಹುದು. ಯೋಚಿಸಿ ಮಾತನಾಡಿ. ಶುಭಸಂಖ್ಯೆ: 8

ಕುಂಭ: ಮನೆವಿಚಾರದಲ್ಲಿ ಶುಭ ಸುದ್ದಿ. ತಾಯಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಸಮಸ್ಯೆ ಪರಿಹಾರಕ್ಕೆ ಕುಟುಂಬದ ಬೆಂಬಲ. ಶುಭಸಂಖ್ಯೆ: 7

ಮೀನ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಿರೀಕ್ಷಿತ ಧನಲಾಭ ಸಾಧ್ಯತೆ ಇದೆ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 1

- Advertisement -
spot_img

Latest News

error: Content is protected !!