Monday, April 29, 2024
Homeಕರಾವಳಿಉಡುಪಿಹೊಸಂಗಡಿ: ಪುರಾತನ ಕಾಲದ ಆನೆ ನೀರು ಕುಡಿಯುವ ಕೊಪ್ಪರಿಗೆ ಪತ್ತೆ

ಹೊಸಂಗಡಿ: ಪುರಾತನ ಕಾಲದ ಆನೆ ನೀರು ಕುಡಿಯುವ ಕೊಪ್ಪರಿಗೆ ಪತ್ತೆ

spot_img
- Advertisement -
- Advertisement -

ಹೊಸಂಗಡಿ: ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ಆನೆ ನೀರು ಕುಡಿಯುವ ಕೊಪ್ಪರಿಗೆ ಹಾಗೂ ಆನೆ ಕಟ್ಟುವ ಕಲ್ಲಿನ ಕಂಬವೊಂದು ತಾಲೂಕಿನ ಹೊಸಂಗಡಿ ಪೇಟೆಯಲ್ಲಿ ಗುರುವಾರ ಪತ್ತೆಯಾಗಿದೆ.

ಸುಮಾರು 100 ವರ್ಷಗಳಿಗೂ ಹಿಂದಿನ ಕಾಲದ ರಾಜರ, ಆನೆ ಕಟ್ಟುವ ಕಲ್ಲಿನ ಕಂಬ ಹಾಗೂ ಆನೆಗೆ ನೀರು ಕುಡಿಯಲು ನಿರ್ಮಿಸಿದ ಕಲ್ಲಿನ ಕೊಪ್ಪರಿಗೆ ಪತ್ತೆಯಾಗಿದೆ.

ಕೊಪ್ಪರಿಗೆ ಹಿಂದೆ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದು, ಆನೆ ಕಟ್ಟುವ ಕಂಬ ಮೊದಲಿನಿಂದಲೂ ಇಲ್ಲಿ ರಸ್ತೆ ಬದಿ, ಕಾಣುತ್ತಿತ್ತು. ಆದರೆ ಆನೆಗೆ ನೀರಿಡುವ ಕೊಪ್ಪರಿಗೆ ಕಾಣಿಸುತ್ತಿರಲಿಲ್ಲ. ಇಲ್ಲಿ ಆ ಕೊಪ್ಪರಿಗೆ ಇತ್ತು ಎಂಬ ಮಾತನ್ನು ಕೇಳಿದ ಇಲ್ಲಿನ ವಿದ್ಯಾರ್ಥಿಗಳಾದ ಸುಹಾಸ್ ಮಲ್ಯ, ಸಮರ್ಥ, ರಿತೀಶ್ ಹಾಗೂ ಅನ್ವಿತ್ ಮಲ್ಯ ಅವರು ಆಸಕ್ತಿಯಿಂದ ಅದನ್ನು ಹುಡುಕಿ, ಹೊರಗೆ ತೆಗೆದಿದ್ದಾರೆ.

- Advertisement -
spot_img

Latest News

error: Content is protected !!