Saturday, June 6, 2026
Homeತಾಜಾ ಸುದ್ದಿಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ

ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ

- Advertisement -
- Advertisement -

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸಾರದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಆನೆ ಬಲರಾಮ (67) ಮೃತಪಟ್ಟಿದೆ. ಅನಾರೋಗ್ಯದಿಂದ ಬಲರಾಮ ಸಾವನ್ನಪ್ಪಿದೆ.

ಕೆಲ ದಿನಗಳಿಂದ ನಾಗರಹೊಳೆ ಉದ್ಯಾನದಲ್ಲಿನ ಹುಣಸೂರು ರೇಂಜ್ ವ್ಯಾಪ್ತಿಯಲ್ಲಿನ ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದಂತ ಬಲರಾಮ ಆನೆಯು ಅನಾರೋಗ್ಯಕ್ಕೆ ತುತ್ತಾಗಿತ್ತು. ಆನೆಯ ಬಾಯಿಯಲ್ಲಿ ಹುಣ್ಣಾಗಿ ಆಹಾರ ಸೇವಿಸಲು ಕಷ್ಟಪಡುತ್ತಿತ್ತು.

ಆನೆಗೆ ಆಹಾರ ಸೇವಿಸಲು, ನೀರು ಕುಡಿಯಲು ಆಗದ ಕಾರಣದಿಂದಾಗಿ ಮತ್ತಷ್ಟು ಕುಗ್ಗಿ ಹೋಗಿತ್ತು. ಸ್ಥಳದಲ್ಲಿಯೇ ಪಶುವೈದ್ಯರು ಠಿಕಾಣಿ ಹೂಡಿ ಚಿಕಿತ್ಸೆ ಕೊಟ್ಟಿದ್ದರೂ, ಇಂದು ಚಿಕಿತ್ಸೆ ಫಲಿಸದೇ ಬಲರಾಮ ಕೊನೆ  ಉಸಿರು ಚೆಲ್ಲಿದೆ.

- Advertisement -

Latest News

error: Content is protected !!