Tuesday, May 7, 2024
Homeತಾಜಾ ಸುದ್ದಿನಾಳೆಯಿಂದ ಮೂರು ದಿನ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ

ನಾಳೆಯಿಂದ ಮೂರು ದಿನ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ

spot_img
- Advertisement -
- Advertisement -

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆ 5 ಗಂಟೆಗೆ ತೆರೆ ಬೀಳಲಿದೆ. ಅಲ್ಲದೇ ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದ. ನಾಳೆ ಸಂಜೆ 5 ರಿಂದ  ಮೇ.10ರ ಮಧ್ಯರಾತ್ರಿವರೆಗೆ ಹಾಗೂ ಮೇ.13ರ ಮತಏಣಿಕೆಯಂದು ಮಧ್ಯರಾತ್ರಿಯವರೆಗೆ ಸೇರಿದಂತೆ ಮೂರು ದಿನ ಮದ್ಯದಂಗಡಿಗಳು ಬಂದ್ ಆಗಲಿವೆ.

ಈ ಸಂಬಂಧ ಆಯಾ ಜಿಲ್ಲಾಡಳಿತದಿಂದ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಮತದಾನದ ಪ್ರಯುಕ್ತ ದಿನಾಂಕ 08-05-2023ರ ಸಂಜೆ 5 ಗಂಟೆಯಿಂದ, 10-05-2023ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಏಣಿಕೆ ಪ್ರಯುಕ್ತ ದಿನಾಂಕ 13-05-2023ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12ಗಂಟೆಯವೆರೆಗ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.

ಮತದಾನ ಮತ್ತು ಮತಏಣಿಕೆಯ ಸಂದರ್ಭದಲ್ಲಿ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಿ, ಶುಷ್ಕ ದಿನ ಎಂದು ಘೋಷಿಸಿ ಆದೇಶಿಸಿದೆ. ಈ ದಿನಗಳಂದು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ತರಹದ ಮಧ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶಿಸಿದ್ದಾರೆ.

- Advertisement -
spot_img

Latest News

error: Content is protected !!