Wednesday, May 8, 2024
Homeಕರಾವಳಿಬೆಳ್ತಂಗಡಿ;224 ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಹರೀಶ್‌ ಪೂಂಜ ಗೆಲುವು ದಾಖಲಿಸಲಿದ್ದಾರೆ - ಅಣ್ಣಾಮಲೈ

ಬೆಳ್ತಂಗಡಿ;224 ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಹರೀಶ್‌ ಪೂಂಜ ಗೆಲುವು ದಾಖಲಿಸಲಿದ್ದಾರೆ – ಅಣ್ಣಾಮಲೈ

spot_img
- Advertisement -
- Advertisement -

ಬೆಳ್ತಂಗಡಿ;ತಮಿಳುನಾಡು ರಾಜ್ಯ ಅಧ್ಯಕ್ಷರು ಹಾಗೂ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರು ಇಂದು ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್‌ ಪೂಂಜ ಅವರ ಪರವಾಗಿ ಅಳದಂಗಡಿಯಲ್ಲಿ ಬೃಹತ್‌ ಸಾರ್ವಜನಿಕ ಸಭೆಯ ಮೂಲಕ ಮತಯಾಚಿಸಿದರು. ಅಳದಂಗಡಿ ಮತ್ತು ನಾರಾವಿ ಜಿಲ್ಲಾ ಪಂಚಾಯತ್‌ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರು, ಮತದಾರರು ಸಾವಿರರಾರು ಸಂಖ್ಯೆಯಲ್ಲಿ ಸೇರುವ ಮೂಲಕ ಅಣ್ಣಾಮಲೈ ಅವರನ್ನು ಭರ್ಜರಿಯಾಗಿ ಸ್ವಾಗತಿಸಿದರು.

ಇದೇ ವೇಳೆ ಮಾತನಾಡಿದ  ಕೆ. ಅಣ್ಣಾ ಮಲೈ ಶಾಸಕ ಹರೀಶ್‌ ಪೂಂಜ ಅವರು 3500 ಕೋಟಿಗೂ ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಯಾವುದೇ ಭಾಗದಲ್ಲೂ ಗ್ರಾಮೀಣ ಪ್ರದೇಶದಲ್ಲಿ 10.5 ಮೀಟರ್ ಅಗಲದ ರಸ್ತೆ ಕಾಣಲು ಸಾಧ್ಯವಿಲ್ಲ ಆದರೆ ಅಂತಹ ರಸ್ತೆಗಳು ಬೆಳ್ತಂಗಡಿಯಲ್ಲಿ ನಿರ್ಮಾಣವಾಗಿದೆ ಎಂದರೆ ಅದರ ಹಿಂದಿರುವ ಹರೀಶ್‌ ಪೂಂಜ ಅವರ ಇಚ್ಛಾಶಕ್ತಿ ಅಮೋಘವಾದುದು. ಹರೀಶ್‌ ಪೂಂಜ ಅವರಂತಹ ದೂರದೃಷ್ಟಿಯುಳ್ಳ ಶಾಸಕನನ್ನು ನೀವು ಗೆಲ್ಲಿಸಲೇಬೇಕು. 224 ಕ್ಷೇತ್ರಗಳಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಬೆಳ್ತಂಗಡಿಯಲ್ಲಿ ಹರೀಶ್‌ ಪೂಂಜ ಗೆಲುವು ದಾಖಲಿಸಲಿದ್ದಾರೆ  ಎಂದರು,

ಇನ್ನು ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ ನನ್ನ ಸಾರ್ವಜನಿಕ ಜೀವನದ ಇತಿಹಾಸದಲ್ಲಿ ಹರೀಶ್ ಪೂಂಜಾ ಅವರಂತ ಶ್ರಮಿಕ ಶಾಸಕನ್ನು ರಾಜ್ಯದ ಯಾವ ಭಾಗದಲ್ಲೂ ಕಂಡಿಲ್ಲ. ಕ್ಷೇತ್ರದ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಜಾತಿಯ ಧರ್ಮ ಮತ ಎಂದು ಭೇದಭಾವ ಮಾಡದೆ ನನ್ನ ಕ್ಷೇತ್ರ ನನ್ನ ಜನ ಎಂದುಕೊಂಡು ಅಭಿವೃದ್ಧಿಯನ್ನು ಮಾಡಿರುವ ಹರೀಶ್‌ ಪೂಂಜ ಅವರನ್ನುಈ ಬಾರಿಯ ಚುನಾವಣೆಯಲ್ಲಿ ಅತಿಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು. ನನಗೆ ವಿಶ್ವಾಸವಿದೆ, 50 ಸಾವಿರಕ್ಕೂ ಅಧಿಕ ಮತಗಳಿಂದ ನಮ್ಮ ಅಭ್ಯರ್ಥಿ ಗೆಲ್ಲುವ ವಾತಾವರಣ ಬೆಳ್ತಂಗಡಿಯಲ್ಲಿ ನಿರ್ಮಾಣವಾಗಿದೆ ಎಂದರು.

ಐದು ವರ್ಷಗಳ ಅವಧಿಯಲ್ಲಿ ರಾಜ್ಯವೇ ಗುರುತಿಸುವಂತೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಮುಂದೆ ಅವಕಾಶ ಮಾಡಿಕೊಟ್ಟರೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುತಿಸುವಂತೆ ಬೆಳ್ತಂಗಡಿ ಕ್ಷೇತ್ರವನ್ನು ಬೆಳಗಿಸುತ್ತೇನೆ. ಐದು ವರ್ಷಗಳಿಂದ ಶ್ರಮಿಕನ ರೀತಿಯಲ್ಲಿ, ನಿಮ್ಮೊಂದಿಗೆ ನಿಂತು ಕ್ಷೇತ್ರದ ಸೇವೆ ಮಾಡಿದ್ದೇನೆ, ಅದೇ ರೀತಿ ಮುಂದೆಯೂ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ – ಹರೀಶ್‌ ಪೂಂಜ

ಸಾರ್ವಜನಿಕ ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ಜಯಂತ್‌ ಕೋಟ್ಯಾನ್‌, ಜಿಲ್ಲಾ ಉಪಾಧ್ಯಕ್ಷರಾದ ಕೊರಗಪ್ಪ ನಾಯ್ಕ್‌, ಬೆಳ್ತಂಗಡಿ ಕ್ಷೇತ್ರದ ಚುನಾವಣಾ ಪ್ರಭಾರಿ ಯತೀಶ್‌ ಆರ್ವಾರ್‌, ಹಿರಿಯ ಬಿಜೆಪಿ ಕಾರ್ಯಕರ್ತ ಡಾಕಯ್ಯ ಪೂಜಾರಿ, ಸುಬ್ರಹ್ಮಣ್ಯ ಅಗರ್ತ, ಅಳದಂಗಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ನಾರಾವಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ ಅಂಡಿಂಜೆ, ಬಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಸೋಮನಾಥ ಬಂಗೇರ, ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ‌, ಹಿರಿಯರಾದ ಶ್ರೀನಿವಾಸ್ ಕಿಣಿ, ಚಲನಚಿತ್ರ ನಟರಾದ ಹಿತೇಶ್ ಪೂಜಾರಿ ಕಾಪಿನಡ್ಕ, ಅನೀಶ್ ಪೂಜಾರಿ ವೇಣೂರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!