Saturday, June 6, 2026
Homeಕರಾವಳಿಬೆಳ್ತಂಗಡಿ : ಮಲವಂತಿಗೆಯಲ್ಲಿ ಕಾಡಾನೆಗಳ ಉಪಟಳ

ಬೆಳ್ತಂಗಡಿ : ಮಲವಂತಿಗೆಯಲ್ಲಿ ಕಾಡಾನೆಗಳ ಉಪಟಳ

- Advertisement -
- Advertisement -

ಬೆಳ್ತಂಗಡಿ : ಮಲವಂತಿಗೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕೃಷಿ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿ ಕೃಷಿ ಹಾನಿ ಉಂಟುಮಾಡಿದ ಬಗ್ಗೆ ತಿಳಿದು ಬಂದಿದೆ.

ಇಲ್ಲಿನ ಪಡುಮಣ್ಣು, ಕುದ್ಮುಲ್, ಪಲಂದ್ರೊಟ್ಟು,ಮಿತ್ತೊಟ್ಟು ಪರಿಸರದಲ್ಲಿ  ನಾಲ್ಕರಿಂದ ಐದರಷ್ಟು ಕಾಡಾನೆಗಳು ಪ್ರವೇಶಿಸಿದ್ದು,ಈ ಸಮಯ ಇದು ಸ್ಥಳೀಯರ ಗಮನಕ್ಕೆ ಬಂದಿದ್ದು ಆನೆಗಳನ್ನು ಅಟ್ಟಲು ಪ್ರಯತ್ನ ನಡೆಸಿದರು.ಆನೆಗಳ ಗುಂಪು ಇಲ್ಲಿಂದ ಕಡಮಗುಂಡಿ ಪ್ರದೇಶದ ಹೋಗಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.

ಇದೇ ಪ್ರದೇಶದ ಸಮೀಪದ ತುಳುಪುಳೆ ಪರಿಸರದಲ್ಲಿ ಒಂಟಿ ಸಲಗ  ಶುಕ್ರವಾರ ರಾತ್ರಿ ತೋಟಗಳಲ್ಲಿ ಕಾಣಿಸಿಕೊಂಡಿದೆ.ಆನೆಗಳು ಹಾನಿ ಉಂಟು ಮಾಡಿದ ಪ್ರದೇಶಗಳಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಲವಂತಿಗೆ ಪರಿಸರದಲ್ಲಿ ಎಲೆ ಚುಕ್ಕಿ ರೋಗ ವಿಪರೀತವಾಗಿದ್ದು ಇದರ ಜತೆ ವನ್ಯಜೀವಿಗಳ ಕಾಟವು ಹೆಚ್ಚುತ್ತಿದ್ದು ಪ್ರದೇಶದ ಕೃಷಿಕರು ಹೈರಾಣಾಗುತ್ತಿದ್ದಾರೆ.

- Advertisement -

Latest News

error: Content is protected !!