Thursday, June 4, 2026
Homeಕರಾವಳಿಕಡಬದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿ

ಕಡಬದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿ

- Advertisement -
- Advertisement -

ಕಡಬ: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾಗಿರುವ ಘಟನೆ ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ಇಂದು ಮುಂಜಾನೆ ನಡೆದಿದೆ.

ಪೇರಡ್ಕ ಹಾಲು ಸೊಸೈಟಿ ಸಿಬ್ಬಂದಿಯಾಗಿರುವ ರಂಜಿತಾ (21) ಎಂಬವರು ಸೊಸೈಟಿ ಗೆ ಮನೆಯಿಂದ ಹೋಗುತ್ತಿದ್ದ ವೇಳೆ ಮೀನಾಡಿ ಎಂಬಲ್ಲಿ ಆನೆ ದಾಳಿ ನಡೆಸಿದೆ. ಇದೇ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ (55) ಎಂಬವರ ಮೇಲೆ ಆನೆ ಅಟ್ಟಹಾಸ ಮೆರೆದಿದೆ.ರಮೇಶ್ ರೈ ಸ್ಥಳದಲ್ಲಿ ಮೃತಪಟ್ಟರೆ ರಂಜಿತ ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!