Monday, June 29, 2026
Homeಕರಾವಳಿಗುಂಡ್ಯದಲ್ಲಿ ರಾತ್ರಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಲಾರಿ ಚಾಲಕನ ಮೇಲೆ ಕಾಡಾನೆ ದಾಳಿ: ಚಾಲಕ...

ಗುಂಡ್ಯದಲ್ಲಿ ರಾತ್ರಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಲಾರಿ ಚಾಲಕನ ಮೇಲೆ ಕಾಡಾನೆ ದಾಳಿ: ಚಾಲಕ ಸ್ಥಳದಲ್ಲೇ ಸಾವು

- Advertisement -
- Advertisement -

ಗುಂಡ್ಯ: ನಿನ್ನೆ ರಾತ್ರಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ವೇಳೆ ಲಾರಿ ಚಾಲಕನ ವೇಳೆ ಕಾಡಾನೆ ದಾಳಿ ಮಾಡಿ ಚಾಲಕ ಸಾವನ್ನಪ್ಪಿರುವ ಘಟನೆ ಗುಂಡ್ಯ ಬಳಿಯ ಶಿರಾಡಿ ಘಾಟ್‌ನ ಕೆಂಪುಹೊಳೆ ಬಳಿ ನಡೆದಿದೆ.

ಮೃತ ಲಾರಿ ಚಾಲಕ ರಾಜಸ್ಥಾನ ಮೂಲದವನೆಂದು ಎನ್ನಲಾಗಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯ ಚಾಲಕ ಕೆಂಪುಹೊಳೆ ಸಮೀಪ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ. ಈ ವೇಳೆ ಕಾಡಾನೆ ಆತನ ಮೇಲೆ ದಾಳಿ ನಡೆಸಿದೆ.

ಲಾರಿ ಚಾಲಕನ ಮೃತದೇಹವನ್ನು ಸಕಲೇಶಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೆಂಪುಹೊಳೆ ಪ್ರದೇಶದಲ್ಲಿ ಆಗಾಗ್ಗೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗುತ್ತಿದ್ದು, ವಾಹನ ಸವಾರರು ಭಯದಲ್ಲೇ ವಾಹನ ಓಡಿಸುವಂತಾಗಿದೆ.

- Advertisement -

Latest News

error: Content is protected !!