Friday, June 5, 2026
Homeತಾಜಾ ಸುದ್ದಿಎಸ್ ಡಿಎಂಸಿ ದೇಣಿಗೆ ಆದೇಶ ವಾಪಸ್ ಪಡೆದ ಶಿಕ್ಷಣ ಇಲಾಖೆ

ಎಸ್ ಡಿಎಂಸಿ ದೇಣಿಗೆ ಆದೇಶ ವಾಪಸ್ ಪಡೆದ ಶಿಕ್ಷಣ ಇಲಾಖೆ

- Advertisement -
- Advertisement -

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ದಾನ ಮತ್ತು ದೇಣಿಗೆಗಳನ್ನು ಸ್ವೀಕರಿಸುವ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

ಎಸ್ ಡಿಎಂಸಿ ವಿದ್ಯಾರ್ಥಿಗಳ ಪೋಷಕರಿಂದ ಶಾಲೆಯ ಅಭಿವೃದ್ಧಿ ಹೆಸರಿನಲ್ಲಿ ದೇಣಿಗೆ ಸ್ವೀಕರಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಕ್ಟೋಬರ್ 19 ರಂದು ಆದೇಶ ಹೊರಡಿಸಲಾಗಿತ್ತು.

ಆದರೆ ಶಿಕ್ಷಣ ಇಲಾಖೆಯ ಈ ಆದೇಶಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಸೂಚನೆ ಮೇರೆಗೆ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶವನ್ನು ವಾಪಸ್ ಪಡೆದಿದೆ.

- Advertisement -

Latest News

error: Content is protected !!