Wednesday, June 3, 2026
Homeತಾಜಾ ಸುದ್ದಿಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಶಾಲಾ ಕಾಲೇಜುಗಳಲ್ಲೇ ಡ್ರಗ್ಸ್ ಸಿಗುತ್ತಿತ್ತು: ನಳಿನ್‌

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಶಾಲಾ ಕಾಲೇಜುಗಳಲ್ಲೇ ಡ್ರಗ್ಸ್ ಸಿಗುತ್ತಿತ್ತು: ನಳಿನ್‌

- Advertisement -
- Advertisement -

ಗದಗ: ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಶಾಲಾ ಕಾಲೇಜುಗಳಲ್ಲಿ ಕೂಡಾ ಡ್ರಗ್ಸ್ ಸಿಗುತ್ತಿತ್ತು. ಅದಕ್ಕೆ ಸಿದ್ದರಾಮ್ಯಯ್ಯ ಅವರೇ ಪುಷ್ಠಿ ನೀಡಿದ್ದು. ಅದ್ರಿಂದ ಬಂದ ಹಣದಲ್ಲೇ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇವೆಲ್ಲವನ್ನೂ ಮಟ್ಟಹಾಕಲಾಗಿದೆ ಎಂದು ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಜಿಲ್ಲೆಯ ಗಜೇಂದ್ರಗಡ ನಗರದಲ್ಲಿ ಬಿಜೆಪಿ ಪದಾಧಿಕಾರಿಗಳ ಸಂಕಲ್ಪ ಯಾತ್ರೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕಟೀಲ್, ಆಗ ಶಾಲಾ ಕಾಲೇಜುಗಳಲ್ಲಿ ಕೂಡಾ ಡ್ರಗ್ಸ್ ಸಿಗುತ್ತಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಮಟ್ಟಹಾಕಲಾಗಿದೆ. ಈ ವಿಷಯದಲ್ಲಿ ಚಲನಚಿತ್ರ ನಟ-ನಟಿಯರು, ರಾಜಕಾರಣಿಗಳನ್ನು ಕೂಡಾ ನಾವು ಬಿಟ್ಟಿಲ್ಲ ಎಂದರು.

- Advertisement -

Latest News

error: Content is protected !!