Sunday, June 7, 2026
Homeಕರಾವಳಿಬೈಕ್ ನಲ್ಲಿ‌ ಮಾದಕ‌ ವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ‌

ಬೈಕ್ ನಲ್ಲಿ‌ ಮಾದಕ‌ ವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ‌

- Advertisement -
- Advertisement -

ಕಾಸರಗೋಡು: ಬೈಕ್ ನಲ್ಲಿ ಸಾಗಾಟ ಮಾಡುತ್ತಿದ್ದ 70 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು ಸಹಿತ ಇಬ್ಬರನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉಳಿಯತ್ತಡ್ಕ ರಹಮತ್ ನಗರದ ಆಹಮ್ಮದ್ ನಿಯಾಝ್ (38) ಮತ್ತು ಪತ್ತನಂತ್ತಿಟ್ಟ ಕೋಣಿಯ ಇಜಾಸ್ ಅಝೀಝ್ (25) ಬಂಧಿತರು.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಿದ್ಯಾನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ನೇತೃತ್ವ ದ ಪೊಲೀಸರು ಕಾರ್ಯಾ ಚರಣೆ ನಡೆಸಿ ಪಟ್ಲ ಕುದ್ರೆಪ್ಪಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಬೈಕ್ ನ್ನು ನಿಲ್ಲಿಸಲು ಸೂಚನೆ ನೀಡಿದರೂ ಬೆನ್ನಟ್ಟಿದ್ದಾಗ ಬೈಕ್ ತೊರೆದು ಪರಾರಿಯಾಗಲೆತ್ನಿಸಿದಾಗ ಇಬ್ಬರನ್ನು ಬಂಧಿಸಲಾಯಿತು.

- Advertisement -

Latest News

error: Content is protected !!