Wednesday, May 1, 2024
Homeತಾಜಾ ಸುದ್ದಿದೇವರ ಸ್ಟ್ಯಾಂಪ್ ಗಳಲ್ಲಿ ಸಪ್ಲೈ ಆಗುತ್ತಿತ್ತು ಡ್ರಗ್ಸ್: ಮಾದಕ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ಹೇಗೆ ಗೊತ್ತಾ

ದೇವರ ಸ್ಟ್ಯಾಂಪ್ ಗಳಲ್ಲಿ ಸಪ್ಲೈ ಆಗುತ್ತಿತ್ತು ಡ್ರಗ್ಸ್: ಮಾದಕ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ಹೇಗೆ ಗೊತ್ತಾ

spot_img
- Advertisement -
- Advertisement -

ಬೆಂಗಳೂರು: ಗಣಪತಿ ದೇವರ ಫೋಟೋ ಸ್ಟ್ಯಾಂಪ್​ಗಳಲ್ಲಿ ಡ್ರಗ್ಸ್​​ ಸಾಗಿಸುತ್ತಿದ್ದ ಗ್ಯಾಂಗ್​ವೊಂದನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ಮೂಲದ ಅರುಣ್ ಆಂಥೋನಿ ಹಾಗೂ ಗಣೇಶ್ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಅಮಲ್‌ ಬೈಜು ಪರಾರಿಯಾಗಿದ್ದಾನೆ. ಅರುಣ್, ಆನೇಕಲ್ ತಾಲೂಕಿನ ಹೆಬ್ಬಗೋಡಿ ಬಳಿಯ ಸ್ಪರ್ಶ್ ಮತ್ತು ಹೆಲ್ತ್ ಸಿಟಿಯಲ್ಲಿ ಎಕ್ಸ್ ರೇ ಟೆಕ್ನಿಶಿಯನ್​ ಆಗಿ ಕೆಲಸ ಮಾಡುತ್ತಿದ್ದ. ಕಸ್ಟಮ್ಸ್​ ಅಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದು, ಹೆಬ್ಬುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಟ್ಟಾಯಂನಿಂದ ಕೋರಿಯರ್ ಮೂಲಕ ಸ್ಟ್ಯಾಂಪ್​ಗಳಲ್ಲಿ ಡ್ರಗ್ಸ್​ ಸಾಗಿಸಲಾಗುತ್ತಿತ್ತು. ಸ್ಟ್ಯಾಂಪ್ ಮೇಲೆ ಗಣಪತಿ ಫೋಟೋ ಹಾಕಿ ಮಾರಾಟ ಮಾಡಲಾಗುತ್ತಿತ್ತು. ದೇವರ ಸ್ಟ್ಯಾಂಪ್ ಅಂದ್ರೆ ಅನುಮಾನ ಬರುವುದಿಲ್ಲ ಎಂದು ಖದೀಮರು ಖತರ್ನಾಕ್ ಐಡಿಯಾ ಮಾಡಿದ್ದರು. ಆದ್ರೆ ಬೆಂಗಳೂರಿನಲ್ಲಿ ಡ್ರಗ್ಸ್​​ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೋರಿಯರ್ ಮತ್ತು ಪೋಸ್ಟ್‌ ಮೇಲೆ ಕಣ್ಣಿಟ್ಟಿದ್ದ ಕಸ್ಟಮ್ಸ್​​​​ ಅಧಿಕಾರಿಗಳು ಕೊನೆಗೂ ಈ ಚಾಲಾಕಿ ಗ್ಯಾಂಗ್​ಅನ್ನು ಹೆಡೆಮುರಿ ಕಟ್ಟಿದ್ದಾರೆ.

ಇನ್ನು ಒಂದು ಸ್ಟ್ಯಾಂಪ್ 4 ಸಾವಿರ ರೂ.ಗೆ ಮಾರಾಟವಾಗುತ್ತಿತ್ತು. ಒಟ್ಟು 400 ಕ್ಕೂ ಹೆಚ್ಚು ಸ್ಟ್ಯಾಂಪ್ ಬಂದಿದ್ದು, ಒಟ್ಟಾರೆ 15 ಲಕ್ಷ ರೂ. ಮಾಲ್ಯದ ಡ್ರಗ್ಸ್​​ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಈ ದಂಧೆ ಮಾಡುತ್ತಿದ್ದು, ಪಬ್ ಮತ್ತು ಶ್ರೀಮಂತರ ಪಾರ್ಟಿಗಳನ್ನೇ ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದ ವಿಚಾರವನ್ನು ಆರೋಪಿಗಳು ತನಿಖೆ ವೇಳೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!