Monday, June 8, 2026
Homeತಾಜಾ ಸುದ್ದಿನಿಧಾನಗತಿಯಲ್ಲಿ ಏರಿಕೆಯತ್ತ ಚಿನ್ನದ ಬೆಲೆ!.. ಇಂದಿನ ಚಿನ್ನದ ದರ ಎಷ್ಟು ಗೊತ್ತಾ?..

ನಿಧಾನಗತಿಯಲ್ಲಿ ಏರಿಕೆಯತ್ತ ಚಿನ್ನದ ಬೆಲೆ!.. ಇಂದಿನ ಚಿನ್ನದ ದರ ಎಷ್ಟು ಗೊತ್ತಾ?..

- Advertisement -
- Advertisement -

ಬೆಂಗಳೂರು:ಚಿನ್ನದ ದರ ಕಳೆದ ಕೆಲವು ದಿನಗಳಿಂದ ಇಳಿಕೆಯತ್ತ ಸಾಗಿ ಆಭರಣ ಪ್ರಿಯರು ಖುಷಿಯಾಗಿದ್ದರು. ಆದರೆ ಈ ವೇಳೆ ಬೆಳ್ಳಿ ಸಾಧ್ಯವಾದಷ್ಟು ಸ್ಥಿರತೆ ಕಾಪಾಡಿಕೊಂಡಿತ್ತು. ಆದರೆ ಈಗ ನಿಧಾನಗತಿಯಲ್ಲಿ ಚಿನ್ನದ ಬೆಲೆ ಏರಿಕೆಯತ್ತ ಮುಖಮಾಡಿದೆ. ಕೊರೋನಾ ದಾಳಿಗೆ ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು.

ಕೊರೋನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿದ್ದು ಲಾಕ್​ಡೌನ್​ ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.ಸೋಮವಾರ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 47,260 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 48,260 ರುಪಾಯಿ ಇದೆ. ಬೆಳ್ಳಿ ಕೇಜಿಗೆ 59,100 ರುಪಾಯಿ ಇದ್ದು ನಿನ್ನೆಗಿಂತ 100 ರೂ. ಇಳಿಕೆ ಕಂಡಿದೆ.

- Advertisement -

Latest News

error: Content is protected !!