Sunday, June 7, 2026
Homeಮನರಂಜನೆಕುಚುಕು ಗೆಳೆಯನ ಬರ್ತಡೇಗೆ ಡಿ ಬಾಸ್ ಸ್ಪೆಷಲ್ ವಿಶ್

ಕುಚುಕು ಗೆಳೆಯನ ಬರ್ತಡೇಗೆ ಡಿ ಬಾಸ್ ಸ್ಪೆಷಲ್ ವಿಶ್

- Advertisement -
- Advertisement -

ಬೆಂಗಳೂರು : ಟಾಕಿಂಗ್ ಸ್ಟಾರ್ ಸೃಜನ್ ಲೊಕೇಶ್ ಅವರಿಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ. ಕನ್ನಡ ಕಿರುತೆರೆ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಲಕ್ಷಾಂತರ ಅಭಿಮಾನಿಗಳ ದಿಲ್ ಕದ್ದವರು ಸೃಜನ್ ಲೊಕೇಶ್ ಅವರು. ಸಿನಿಮಾಗಳಿಗಿಂತ ಹೆಚ್ಚಾಗಿ ಅವರು ಈ ಕಾರ್ಯಕ್ರಮದ ಮೂಲಕವೇ ಜನರಿಗೆ ಹೆಚ್ಚು ಹತ್ತಿರವಾದವರು.

ಮಾತಿನ ಮಲ್ಲ ಸೃಜನ್ ಲೊಕೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ . ಸಾಕಷ್ಟು ಅಭಿಮಾನಿಗಳು ಸೃಜನ್ ಲೊಕೇಶ್ ಅವರಿಗೆ ಶುಭ ಹಾರೈಸಿದ್ದಾರೆ. ಇನ್ನು ಸೃಜನ್ ಲೊಕೇಶ್ ಹಾಗೂ ದರ್ಶನ್ ತೂಗುದೀಪ್ ಅವರು ಎಷ್ಟೊಳ್ಳೆಯ ಸ್ನೇಹಿತರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಕುಟುಕು ಗೆಳೆಯನ ಹಬ್ಬಕ್ಕೆ ದರ್ಶನ್ ತಾವಿಬ್ಬರು ಜೊತೆಗಿರುವ ಫೋಟೋ ಹಾಕಿ ವಿಶ್ ಮಾಡಿದ್ದಾರೆ. ನಿನ್ನೆಲ್ಲಾ ಇಷ್ಟಾರ್ಥಗಳು ಬೇಗನೆ ಈಡೇರಲಿ ಅಂತಾ ಹಾರೈಸಿದ್ದಾರೆ.

- Advertisement -

Latest News

error: Content is protected !!