Friday, June 5, 2026
HomeUncategorizedರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮಹಾ ಟ್ವಿಸ್ಟ್: ಸಿಡಿ ಲೇಡಿಗಿತ್ತಂತೆ ಮಾಜಿ ಸಚಿವನ ಜೊತೆಗೆ ಸಂಪರ್ಕ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮಹಾ ಟ್ವಿಸ್ಟ್: ಸಿಡಿ ಲೇಡಿಗಿತ್ತಂತೆ ಮಾಜಿ ಸಚಿವನ ಜೊತೆಗೆ ಸಂಪರ್ಕ

- Advertisement -
- Advertisement -

ಬೆಂಗಳೂರು: ಸಿಡಿ ಪ್ರಕರಣದಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಿಡಿ ಯುವತಿ ಮಾಜಿ ಸಚಿವ ಡಿ.ಸುಧಾಕರ್‌ ಅವರ ಜೊತೆಗೆ ಸುದೀರ್ಘವಾದ ಕಾಲ ಸಂಪರ್ಕವನ್ನು ಹೊಂದಿದ್ದರು ಎನ್ನಲಾಗಿದೆ. ಮಾಜಿ ಸಚಿವ ಸುಧಾಕರ್‌ ಅವರೊಂದಿಗೆ ಸಿಡಿ ಲೇಡಿ ಹಣಕಾಸಿನ ವ್ಯವಹಾರನ್ನು ಕೂಡ ಹೊಂದಿದ್ದರು ಎನ್ನುವ ಬಗ್ಗೆ ಎಸ್‌ಐಟಿ ತನಿಖೆಯಲ್ಲಿ ಕಂಡು ಬಂದಿದ್ದು, ಇದಲ್ಲದೇ ಅನೇಕ ಬಾರಿ ಸಿಡಿ ಲೇಡಿ ಹಾಗೂ ಸುಧಾಕರ್‌ ನಡುವೆ ಕರೆಗಳು ವಿನಿಮಯವಾಗಿದ್ದಾವೆ ಎನ್ನಲಾಗಿದೆ. ಇನ್ನೂ ಮೈಸೂರು ಮೂಲದ ಶ್ರೀಮಂತ ರಿಯಲ್‌ ಎಸ್ಟೆಟ್‌ ಉದ್ಯೋಗಿಯೊಬ್ಬರ ಜೊತೆಗೆ ಕೂಡ ಸಿಡಿ ಲೇಡಿ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಇನ್ನೂ ಸಿಡಿ ಲೇಡಿ ಜೊತೆಗೆ ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಡಿ.ಸುಧಾಕರ್‌ ಅವರಿಗೆ ಇರುವ ಸಂಬಂಧವನ್ನು ತಿಳಿದುಕೊಳ್ಳುವ ಸಲುವಾಗಿ ಎಸ್‌ಐಟಿ ಅಧಿಕಾರಿಗಳು ಸುಧಾಕರ್‌ ಅವರಿಗೆ ನೋಟಿಸ್‌ ನೀಡಿ ವಿಚಾರಣೆಗೆ ನೀಡುವ ಸಾಧ್ಯತೆ ಇದ್ದು, ತನಿಖೆಗೆ ಸಂಬಂಧಪಟ್ಟಂತೆ ಇಬ್ಬರ ನಡುವಿನ ಸಂಬಂಧ, ಹಣಕಾಸಿನ ವ್ಯವಹಾರ, ಇಬ್ಬರು ಎಷ್ಟು ದಿನದಿಂದ ಸಂಬಂಧ ಹೊಂದಿದ್ದಾರೆ. ಇಬ್ಬರ ನಡುವೆ ಇರುವ ಸಂಬಂಧವಾದ್ರು ಏನು? ಸುಧಾಕರ್‌ ಕೂಡ ಸಿಡಿ ಲೇಡಿ ಬೆದರಿಕೆಗೆ ಈಡಾಗಿದ್ದಾರ ಎನ್ನುವುದರ ಬಗ್ಗೆ ಎಸ್‌ಐಟಿ ದಳ ತನಿಖೆ ನಡೆಸಲಿದೆ.

‘ಸಿಡಿ ಲೇಡಿ’ ಯೊಂದಿಗೆ ಸಿಡಿ ಹೊರ ಬರುವ ಎರಡು ದಿನ ಸಂಪರ್ಕವನ್ನು ಸುಧಾಕರ್‌ ಅವರು ಸಂಪರ್ಕವನ್ನು ಹೊಂದಿದ್ರು ಎನ್ನಲಾಗಿದ್ದು, ಸಿಡಿ ಲೇಡಿ ಅತಿ ಹೆಚ್ಚು ಕರೆಗಳನ್ನು ಮಾಡಿರುವವರ ಪಟ್ಟಿಯಲ್ಲಿ ಡಿ.ಸುಧಾಕರ್‌ ಅವರ ನಂಬರ್‌ ಇದೇ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನೂ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸುಧಾಕರ್‌ ಇದು ಸುಳ್ಳಾಗಿದ್ದು, ನಾನು ಯಾರಿಗೂ ಹಣವನ್ನು ಕಳುಹಿಸಿಲ್ಲ, ನನಗೆ ಇದನ್ನು ನೋಡಿ ನಗಬೇಕೋ ಅಳಬೇಕೋ ನನಗೆ ತಿಳಿದಿಲ್ಲ, ಆಕೆಯ ಬಳಿ ನನ್ನ ನಂಬರ್‌ ಇರಬಹುದು, ನನಗೆ ಪ್ರತಿ ನಿತ್ಯ ನೂರಾರು ಜನ ಕರೆ ಮಾಡುತ್ತಿರುತ್ತಾರೆ, ಅದನ್ನು ನನಗೆ ನೆನಪು ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

- Advertisement -

Latest News

error: Content is protected !!