Wednesday, May 1, 2024
Homeತಾಜಾ ಸುದ್ದಿಖ್ಯಾತ ಹೃದ್ರೋಗ ತಜ್ಞ ಕರಾವಳಿಯ ಹೆಮ್ಮೆಯ ವೈದ್ಯ- ಡಾ.ಬಿ.ಎಂ.ಹೆಗ್ಡೆ ಅವರಿಗೆ ಒಲಿದುಬಂತು ಪದ್ಮ ವಿಭೂಷಣ ಪುರಸ್ಕಾರ

ಖ್ಯಾತ ಹೃದ್ರೋಗ ತಜ್ಞ ಕರಾವಳಿಯ ಹೆಮ್ಮೆಯ ವೈದ್ಯ- ಡಾ.ಬಿ.ಎಂ.ಹೆಗ್ಡೆ ಅವರಿಗೆ ಒಲಿದುಬಂತು ಪದ್ಮ ವಿಭೂಷಣ ಪುರಸ್ಕಾರ

spot_img
- Advertisement -
- Advertisement -

ನವದೆಹಲಿ:ಈ ಸಾಲಿನ ಪದ್ಮ ವಿಭೂಷಣ ಪುರಸ್ಕಾರ ಪಟ್ಟಿ ಈಗಾಗಲೇ ಹೊರಬಿದ್ದಿದ್ದು ಕರಾವಳಿಯ ಹೃದ್ರೋಗ ತಜ್ಞ ಬಿ.ಎಂ.ಹೆಗ್ಡೆ, ಸೇರಿದಂತೆ ಏಳುಮಂದಿ ಆಯ್ಕೆಯಾಗಿದ್ದಾರೆ. ಹಿನ್ನೆಲೆ ಗಾಯಕ ಎಸ್‌.ಪಿ.ಬಾಲಸುಬ್ರಮಣ್ಯಂ ಅವರಿಗೂ ಮರಣೋತ್ತರ ಪದ್ಮ ವಿಭೂಷಣ ದೊರಕುತ್ತಿದೆ. ಅಲ್ಲದೆ ಹಿರಿಯ ನಾಟಕಕಾರ ಚಂದ್ರಶೇಖರ ಕಂಬಾರ ಸೇರಿ ಹತ್ತು ಮಂದಿ ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ವೈದ್ಯಕೀಯ ವಿಜ್ಞಾನಗಳ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಹೃದ್ರೋಗ ತಜ್ಞ ಬಿ.ಎಂ.ಹೆಗ್ಡೆ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ಹಾಗೂ ಮದ್ರಾಸ್ ವಿಶ್ವವಿದ್ಯಾಲಯದಿಂದ ವೈದ್ಯ (ಎಂಬಿಬಿಎಸ್) ಪದವಿಯನ್ನು(1960) ಪಡೆದವರು. ಇವರು ಲಖನೌ ವಿಶ್ವವಿದ್ಯಾಲಯದಲ್ಲಿ ಎಂ.ಡಿ. ಪದವಿಪಡೆದ ಬಳಿಕ ಉನ್ನತ ಶಿಕ್ಷಣವನ್ನು ಲಂಡನ್‌ನಲ್ಲಿ ಪಡೆದರು.ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ (ಮಾಹೆ) ಕುಲಪತಿಗಳಾಗಿ ಸೇವೆ ಸಲ್ಲಿಸಿ ಸಧ್ಯ ಮಂಗಳೂರಿನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!