Thursday, May 2, 2024
Homeಜ್ಯೋತಿಷ್ಯಮಂಗಳವಾರದ ನಿತ್ಯಭವಿಷ್ಯ: ಈ ದಿನ ನಿಮ್ಮ ರಾಶಿಯ ಭವಿಷ್ಯ ಹೇಗಿದೆ ನೋಡಿ..

ಮಂಗಳವಾರದ ನಿತ್ಯಭವಿಷ್ಯ: ಈ ದಿನ ನಿಮ್ಮ ರಾಶಿಯ ಭವಿಷ್ಯ ಹೇಗಿದೆ ನೋಡಿ..

spot_img
- Advertisement -
- Advertisement -

ನಿತ್ಯ ಪಂಚಾಂಗ:
ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷ, ತ್ರಯೋದಶಿ ತಿಥಿ, ಆರ್ದ್ರೆ ನಕ್ಷತ್ರ,
ರಾಹುಕಾಲ: ಇಂದು ಅಪರಾಹ್ನ 3:17ರಿಂದ 4:41ಗಂಟೆವರೆಗೆ.
ಗುಳಿಕ ಕಾಲ ಮಧ್ಯಾಹ್ನ 12:28 ಗಂಟೆ ಇಂಮಧ್ಯಾಹ್ನ 1:52 ಗಂಟೆವರೆಗೆ.
ಸೂರ್ಯೋದಯ: ಬೆಳಿಗ್ಗೆ 6.49.
ಸೂರ್ಯಾಸ್ತ: ಸಂಜೆ 7 ಗಂಟೆ.

ತಾ.26-01-2021 ರ ಮಂಗಳವಾರದ ರಾಶಿಭವಿಷ್ಯ
ಮೇಷ:
ಹಿತವಾದ ಮಾತುಗಳು ಗೌರವವನ್ನು ವೃದ್ಧಿಸುತ್ತದೆ. ಆರ್ಥಿಕ ಸಂಕಷ್ಟಗಳು ಎದುರಾಗುವವು. ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಿರಿ.ಹಿತೈಷಿಗಳಂತೆ ವರ್ತಿಸುವವರಿಂದ ದೂರವಿರಿ. ಉದ್ಯೋಗದಲ್ಲಿ ನಿಮ್ಮ ಏಕಾಂತದಲ್ಲಿ ಮಾಡುವ ಕೆಲಸ ಕಾರ್ಯಗಳು ಸಫಲತೆ ಪಡೆಯುತ್ತದೆ. ಕುಟುಂಬದ ಸದಸ್ಯರು ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸುತ್ತಾರೆ. ಕಂಕಣ ಭಾಗ್ಯ ಕೂಡಿ ಬಂದಿದೆ. ಆರ್ಥಿಕ ಸಮಸ್ಯೆ ಪರಿಹಾರ ಆಗಲು ರಚನಾತ್ಮಕವಾಗಿ ಯೋಚಿಸುವ ನಿಮ್ಮ ಸಾಮರ್ಥ್ಯ ಶತ್ರುಗಳಿಂದ ಹಾಳು ಆಗುತ್ತದೆ.
ಶುಭ ಸಂಖ್ಯೆ:6

ವೃಷಭ:
ನಿಶ್ಚಿತ ಆರ್ಥಿಕ ಸ್ಥಿತಿ ಇರುವದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ಮನೆಯಲ್ಲಿ ಧರ್ಮ ಕಾರ್ಯಗಳು ನಡೆಸಲಾಗುವುದು. ಉದ್ಯೋಗಿಗಳಿಗೆ ಜವಾಬ್ದಾರಿಯುತ ಕೆಲಸಗಳು ಹುಟ್ಟುತ್ತವೆ. ನಿಮ್ಮ ಸಂಗಾತಿ ವಿಷಯದಲ್ಲಿ ಮನಸ್ತಾಪ ಮಾಡಿಕೊಳ್ಳಬೇಡಿ. ನಿಮ್ಮ ವ್ಯಯಕ್ತೀಕ ಜೀವನದಲ್ಲಿ ಯೋಚನೆ ಕಂಡುಬರುತ್ತದೆ. ಆರೋಗ್ಯದಲ್ಲಿ ತಲೆ ನೋವು ಕೀಲುನೋವು ಕಾಣಿಸಿಕೊಳ್ಳುತ್ತದೆ.
ಶುಭ ಸಂಖ್ಯೆ: 9

ಮಿಥುನ:
ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ನೀವು ಸಂದಿಗ್ಧ ಪರಿಸ್ಥಿತಿಯನ್ನು ಈ ದಿನ ಎದುರಿಸಬೇಕಾಗುತ್ತದೆ. ನಿಮಗೆ ವಶೀಕರಣದಂತಹ ಸಮಸ್ಯೆಗಳು ಕಾಡಿಸುತ್ತದೆ. ನಿಮ್ಮನ್ನು ನೀವೇ ದೂಷಿಸ ಕೊಳ್ಳುವುದು ಆಗುತ್ತದೆ. ನಿಮಗೆ ಕಾಡುವಂತಹ ರೋಗಗಳು ಕೂಡ ಬಹಳ ರಹಸ್ಯಮಯವಾಗಿರುತ್ತದೆ.
ಶುಭ ಸಂಖ್ಯೆ: 1

ಕರ್ಕ:
ಸಹನೆ ಇಲ್ಲದ ಆತುರದ ನಡೆಯಿಂದ ಹಾನಿ ಸಂಭವ ಎಚ್ಚರಿಕೆ ವಹಿಸಿರಿ. ಅನೀರೀಕ್ಷಿತವಾಗಿ ಬರುವ ವಿಘ್ನಗಳು ತಾವಾಗಿಯೇ ಪರಿಹಾರ ಕಾಣುವವು. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ನೀವು ಪ್ರೀತಿಸಿದ ವ್ಯಕ್ತಿಯನ್ನು ಕಳೆದು ಕೊಳ್ಳುವುದು ಆಗುತ್ತದೆ. ಹಣಕಾಸಿನಲ್ಲಿ ಉತ್ತಮ ಲಾಭವಿದೆ. ಉದ್ಯೋಗದಲ್ಲಿ ನಿಮಗೆ ಒಳ್ಳೆಯ ಆಲೋಚನೆಗಳು ಮತ್ತು ಕಾರ್ಯಗಳು ಅಗತ್ಯ ಇರುವ ಸಮಾಧಾನ ಕಾಣಿಸಿಕೊಳ್ಳುತ್ತದೆ. ಕುಟುಂಬದಲ್ಲಿ ಒತ್ತಡಗಳು ಬೇರೆ ಆಗಿ ನಿಮಗೆ ನೆಮ್ಮದಿ ಮತ್ತು ವಿಶ್ರಾಂತಿ ತಂದು ಕೊಡುತ್ತದೆ.
ಶುಭ ಸಂಖ್ಯೆ: 4

ಸಿಂಹ:
ಯೋಜನಾಬದ್ಧ ಕೆಲಸಗಳೂ ಕೂಡ ಮುಂದೂಡುವ ಪ್ರಸಂಗವಿದೆ. ಆಪ್ತವಲಯದಲ್ಲಿ ಸಮಾಲೋಚಿಸಿರಿ. ಅನಿವಾರ್ಯ ಕರ್ತವ್ಯಗಳಿಗೆ ಸಮಯ ಹೊಂದಾಣಿಕೆ ಮಾಡುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಮಡದಿಯೊಂದಿಗೆ ಸುಖಕರ ಜೀವನ ಹೊಂದುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಾಣುವುದು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಗುರುಬಲ ಇಲ್ಲದ ಕಾರಣ ಮದುವೆ ಕಾರ್ಯಗಳು ವಿಳಂಬ ಆಗಬಹುದು. ಹಣಕಾಸಿನ ಕೆಲಸ ಉತ್ತಮ.
ಶುಭ ಸಂಖ್ಯೆ: 7

ಕನ್ಯಾ:
ಹೊಸ ಆಲೋಚನೆಯೊಂದು ಕಾರ್ಯರೂಪಕ್ಕೆ ಬರುವದು. ಸಹವರ್ತಿಗಳ ಅಸಹಕಾರ ಇದ್ದರೂ ತೊಂದರೆ ಆಗಲಾರದು. ಅನಪೇಕ್ಷಿತ ಸ್ಥಾನ ಬದಲಾವಣೆ ಆಗುವ ಸಾಧ್ಯತೆ ಇದೆ. ಸರಿಯಾದ ಧ್ಯೇಯದಿಂದ ಸಮಾಧಾನ ಇರುವದು. ಉತ್ತಮ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀವು ಸಹೋದ್ಯೋಗಿಗಳ ಗಮನ ಸೆಳೆಯುತ್ತದೆ. ನಿಮ್ಮ ಕೌಟುಂಬಿಕ ವರ್ಗಗದವರಿಂದ ಸಂಭ್ರಮಾಚರಣೆ ಆನಂದದ ಕ್ಷಣಗಳು ಕಾಣಬಹುದು. ಪ್ರೇಮಿಗಳ ಜೀವನ ಮದುವೆ ಕಾರ್ಯಗಳಿಗೆ ಮುಂದುವರಿಯುವುದು. ಧನ ವಿಚಾರದಲ್ಲಿ ಆಕರ್ಷಣೆ ಆಗುತ್ತದೆ.
ಶುಭ ಸಂಖ್ಯೆ 3

ತುಲಾ:
ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಕುಜದೋಷವಿದ್ದಾಗ ರಕ್ತದೊತ್ತಡ ಸಮಸ್ಯೆಗಳು ಆರೋಗ್ಯದಲ್ಲಿ ಕಿರಿಕಿರಿ ಉಂಟು ಮಾಡುತ್ತದೆ. ನಿಮ್ಮ ಆರ್ಥಿಕಸ್ಥಿತಿ ಸುಧಾರಿಸಿದರೂ ಹಣದ ವೆಚ್ಚ ಕಡಿಮೆ ಆಗುವುದಿಲ್ಲ. ನಿಮ್ಮ ಕೆಲಸದಲ್ಲಿ ಇರುವ ಒತ್ತಡ ಹೆಚ್ಚಾಗಿ ನಿದ್ದೆ ಸರಿಯಾಗಿ ಬರುವುದಿಲ್ಲ. ಇದರಿಂದ ಸ್ವಲ್ಪ ಅನಾರೋಗ್ಯದ ಸಮಸ್ಯೆಗಳು ಉದ್ಬವವಾಗುತ್ತವೆ.
ಶುಭ ಸಂಖ್ಯೆ:8

ವೃಶ್ಚಿಕ:
ತಾಪತ್ರಯಗಳೆಲ್ಲ ದೂರವಾಗಿದ್ದು ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ವ್ಯಾಪಾರಾದಿ ಉದ್ಯಮಗಳು ಇಷ್ಟದಂತೆ ನಡೆಯುತ್ತದೆ. ಕೆಲವೊಮ್ಮೆ ಸಣ್ಣ ವಿಷಯಗಳಿಗೂ ಭಯ ತೋರಿದರೂ ಹಾನಿಯಿಲ್ಲ. ಆರೋಗ್ಯ ಸಾಮಾನ್ಯವಾಗಿ ಶೀತದಿಂದ ಕೂಡಿರುತ್ತದೆ. ಯೋಗ ಮತ್ತು ವ್ಯಾಯಾಮ ದೇಹಾರೋಗ್ಯ ಕಾಪಾಡಲು ಉತ್ತಮ ಎನಿಸುತ್ತದೆ. ಉದ್ಯೋಗಸ್ಥರಲ್ಲಿ ಯಾವುದೋ ವಾದ ವಿವಾದ ಕೆಲಸದಲ್ಲಿ ನಡೆಯುವುದು. ಒಳ್ಳೆಯ ಹಾಸ್ಯ ಮತ್ತು ನಿಮ್ಮ ಜ್ಞಾನದಿಂದ ಕುಟುಂಬದಲ್ಲಿ ಶಾಂತಿ ತುಂಬಬಹುದು.
ಶುಭ ಸಂಖ್ಯೆ: 6

ಧನು:
ದಿನೇ ದಿನೇ ಅಭಿವೃದ್ಧಿ ತೋರಿ ವ್ಯವಹಾರಗಳೆಲ್ಲಾ ಇಷ್ಟದಂತೆ ನಡೆಯುತ್ತದೆ. ಹಲವು ರೀತಿಯಿಂದ ಧನಾಗಮನ ತೋರಿಬರುತ್ತದೆ. ಐಶ್ವರ್ಯ, ಮುಟ್ಟಿದ್ದು ಚಿನ್ನವಾಗುವ ಕಾಲ. ಸ್ಥಿರಾಸ್ತಿ ಪ್ರಾಪ್ತಿ. ಅಲ್ಪ ಅನಾರೋಗ್ಯ ತೋರಿದರೂ ಕ್ಷಣಿಕವೆನ್ನಬಹುದು. ಈ ದಿನ ಜೀವನ ಸಂಗಾತಿಯೊಂದಿಗೆ ಹೆಚ್ಚು ಕಾಳಜಿಯನ್ನು ಕಾಣಿಸಿಕೊಳ್ಳುತ್ತದೆ. ಹಣಕಾಸು ಲಾಭದಾಯಕವಾಗಿರುತ್ತದೆ. ಮಕ್ಕಳು ಓದಿನಲ್ಲಿ ಆಸಕ್ತಿ‌ ತೋರಬೇಕಾಗುತ್ತದೆ. ಮನೆಯಲ್ಲಿ ಸದಸ್ಯರ ಖುಷಿಯ ಸ್ವಭಾವ ಕುಟುಂಬದಲ್ಲಿನ ವಾತವರಣ ಹಗುರಗೊಳಿಸುತ್ತದೆ.
ಶುಭ ಸಂಖ್ಯೆ: 5

ಮಕರ:
ವ್ಯಾಪಾರಾದಿ ಉದ್ಯಮಗಳಲ್ಲಿ ಪ್ರಗತಿಯಿದ್ದು ಧನಲಾಭ, ಐಶ್ವರ್ಯವೃದ್ಧಿಯಿದೆ. ಆದರೆ ವ್ಯವಹಾರಿಕ ಕಿರಿಕಿರಿ ಇರುವದು. ಅನಿರೀಕ್ಷಿತ ಧನಲಾಭವೂ ಇದೆ. ಕೈಗೊಂಡ ಕಾರ್ಯಗಳಿಗೆ ವಿಘ್ನ ತೋರಿದರೂ ನೆರವೇರುತ್ತದೆ. ನೀವು ಭವಿಷ್ಯಕ್ಕಾಗಿ ಹೊಸ ಹೊಸ ಕೆಲಸಗಳ ಬಗ್ಗೆ ಕೂಡ ಗಮನ ನೀಡಬೇಕು. ನೀವು ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ. ನಿಮ್ಮ ಸ್ನಾಯುಗಳ ಸೆಳೆತದಿಂದ ನೋವನ್ನು ಅನುಭವಿಸುತ್ತಾರೆ. ಹಣಕಾಸಿನಲ್ಲಿ ಖರ್ಚು ಯಥೇಚ್ಛವಾಗಿ ಕಾಣಿಸಿಕೊಳ್ಳುತ್ತದೆ.
ಶುಭ ಸಂಖ್ಯೆ:1

ಕುಂಭ:
ಮಹತ್ತರ ಯೋಜನೆಗಳು ಕಾರ್ಯಗತವಾಗಲು ಪ್ರಾಜ್ಞರ ಮಾರ್ಗದರ್ಶನ. ಜೀವನದ ಏಳಿಗೆಗೆ ಚಿಂತನೆ. ಕೆಲಸದ ನಡುವೆ ಮತ್ತೊಂದು ಕಾರ್ಯ ವಹಿಸಿಕೊಳ್ಳಲು ಚೈತನ್ಯ. ಮಹಿಳೆಯರು ಪಶ್ಚಾತಾಪಕ್ಕೆ ಅವಕಾವಿಲ್ಲದಂತೆ ನಡೆದುಕೊಳ್ಳುವುದು ಒಳಿತು. ಮದುವೆ ವಿಚಾರ ಮನೆಯಲ್ಲಿ ಕಂಡುಬರುತ್ತದೆ. ಈ ದಿನ ಮಡದಿ ಮತ್ತು ಮಕ್ಕಳು ನಿಮಗೆ ಹೊಸ ಬಗೆಯ ಆಲೋಚನೆಯನ್ನು ತಿಳಿಸಿ ಕೊಡಬಹುದಾಗಿದೆ. ಬಂದಿರುವ ಅವಕಾಶಗಳನ್ನು ಲಘುವಾಗಿ ಪರಿಗಣಿಸಬೇಡಿ ಆದಷ್ಟು ವಿವೇಚನೆಯಿಂದ ಕಾರ್ಯ ಪ್ರವೃತ್ತರಾಗುವುದು ಒಳಿತು.
ಶುಭ ಸಂಖ್ಯೆ: 3

ಮೀನ:
ಏಕಾಂಗಿತನದ ಬೇಸರ ಪರಿಸರದಿಂದ ಹೊರಬಂದು ಹೊಸಬರೊಂದಿಗೆ ಬಾಳುವ ಸಂಕಲ್ಪ. ನಿರಾಕರಿಸಿದ್ದ ಜವಾಬ್ದಾರಿ ಪುನ: ಸುಪರ್ದಿಗೆ ಬಂದು ಮೆಚ್ಚುಗೆಯಾಗಿ ನಿಭಾವಣೆ. ಬಾಳ ಸಂಗಾತಿ ಜತೆಗಿನ ಚಿಕ್ಕ ಪುಟ್ಟ ಚರ್ಚೆಗಳೇ ಮುಂದೆ ವಿರಸಕ್ಕೆ ದಾರಿಯಾದೀತು. ಮಾನಸಿಕ ಖಿನ್ನತೆ ಆವರಿಸಬಹುದು ಬರುವ ಒತ್ತಡಗಳನ್ನು ಎದುರಿಸಿ ಸಮತೋಲನ ಕಾಪಾಡಿಕೊಳ್ಳಿ. ಆರ್ಥಿಕ ಉಳಿತಾಯಕ್ಕೆ ಆದಷ್ಟು ಆದ್ಯತೆ ನೀಡುವುದು ಒಳಿತು. ಅತಿಯಾದ ದುಂದುವೆಚ್ಚ ದಿಂದ ಮಾರಕವಾಗಬಹುದು. ದಾಖಲೆಗಳ ಬಗ್ಗೆ ನಿರ್ಲಕ್ಷ ಬೇಡ.
ಶುಭ ಸಂಖ್ಯೆ: 9

- Advertisement -
spot_img

Latest News

error: Content is protected !!