Sunday, April 28, 2024
Homeತಾಜಾ ಸುದ್ದಿಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

spot_img
- Advertisement -
- Advertisement -

ಅಮೇರಿಕಾ; ಪೋರ್ನ್ ಸ್ಟಾರ್  ನಟಿ ಸ್ಟಾರ್ಮಿ ಡೇನಿಯಲ್ಸ್‌ ಜೊತೆ ದೈಹಿಕ ಸಂಬಂಧ ಬೆಳೆಸಿ, ಅದನ್ನು ಮುಚ್ಚಿಡಲು ಆಕೆಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (76) ಅವರನ್ನು ಸ್ಥಳೀಯ ಪೊಲೀಸರು ಮಂಗಳವಾರ ಬಂಧನಕ್ಕೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ,

ಟ್ರಂಪ್‌ ವಿರುದ್ಧ ಕೇಳಿಬಂದ ಆರೋಪ ತನಿಖೆ ನಡೆಸಲು ಸೂಕ್ತವಾಗಿದೆ ಎಂದು ಇತ್ತೀಚೆಗೆ ಗ್ರ್ಯಾಂಡ್‌ ಜ್ಯೂರಿ ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಭಾರೀ ಬಿಗಿಭದ್ರತೆಯೊಂದಿಗೆ ಟ್ರಂಪ್‌ ಅವರನ್ನು ಮಂಗಳವಾರ ಮ್ಯಾನ್‌ಹಟನ್‌ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ ಅವರನ್ನು ಬಂಧಿಸಿದ ಪೊಲೀಸರು ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ಸ್ಥಳೀಯ ನ್ಯಾಯಾಲಯ ಲೈಂಗಿಕ ಪ್ರಕರಣ ಮುಚ್ಚಿಡಲು ಹಣ ನೀಡಿದ್ದೂ ಸೇರಿದಂತೆ ಹಣ ವಂಚನೆಯ 30ಕ್ಕೂ ಹೆಚ್ಚು ದೋಷಾರೋಪಗಳನ್ನು ಹೊರಿಸಿತು.

ಆದರೆ ಈ ಆರೋಪಗಳನ್ನು ಟ್ರಂಪ್‌ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.. ಆದರೂ ಕ್ರಿಮಿನಲ್‌ ಆರೋಪಕ್ಕೆ ತುತ್ತಾದ ಅಮೆರಿಕದ ಮೊದಲ ಮಾಜಿ/ಹಾಲಿ ಅಧ್ಯಕ್ಷ ಎಂಬ ಕಳಂಕಕ್ಕೆ ಟ್ರಂಪ್‌ ತುತ್ತಾದರು. ಆದರೆ ಅಮೆರಿಕ ಮಾಜಿ ಅಧ್ಯಕ್ಷ ಮತ್ತು ಗುಪ್ತಚರ ಸಂಸ್ಥೆಯ ಭದ್ರತೆ ಹೊಂದಿರುವ ಕಾರಣ ಟ್ರಂಪ್‌ ಅವರನ್ನು ಜೈಲಿಗೆ ಕಳುಹಿಸದೇ ಬಿಟ್ಟು ಕಳುಹಿಸಲಾಯಿತು.

- Advertisement -
spot_img

Latest News

error: Content is protected !!