Thursday, June 4, 2026
Homeಶಿವಮೊಗ್ಗಶಿವಮೊಗ್ಗ ;ಕೋಳಿ ಅಂಕದ ಕೋಳಿಯ ದೇಹ ಹೊಕ್ಕ 10 ಸೆ.ಮೀ ಉದ್ದದ ಮೀನಿನ ಮುಳ್ಳು; ಶಸ್ತ್ರಚಿಕಿತ್ಸೆ...

ಶಿವಮೊಗ್ಗ ;ಕೋಳಿ ಅಂಕದ ಕೋಳಿಯ ದೇಹ ಹೊಕ್ಕ 10 ಸೆ.ಮೀ ಉದ್ದದ ಮೀನಿನ ಮುಳ್ಳು; ಶಸ್ತ್ರಚಿಕಿತ್ಸೆ ಮೂಲಕ ಕೋಳಿಯ ಜೀವ ಉಳಿಸಿದ ಪಶುವೈದ್ಯರು

- Advertisement -
- Advertisement -

ಶಿವಮೊಗ್ಗ ; ಮೇವು ಸೇವನೆ ವೇಳೆ ಮೇವಿನ ಜೊತೆ 10 ಸೆ.ಮೀ ಉದ್ದದ ಮೀನಿನ ಮುಳ್ಳು ಕೋಳಿ ಅಂಕದ ಕೋಳಿಯ ದೇಹ ಸೇರಿ ಅಪಾಯ ಸ್ಥಿತಿಯಲ್ಲಿದ್ದ ಕೋಳಿಯ ಜೀವವನ್ನು ಪಶುವೈದ್ಯರು ಉಳಿಸಿದ ಘಟನೆ ಶಿವವೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

ತೀರ್ಥಹಳ್ಳಿಯ ಲಿಬಾಸ್ ಟೖಲರ್ ಅವರಿಗೆ ಸೇರಿದ ಅಸ್ಸೀಲ್ ತಳಿಯ ಕೋಳಿಯು ಮೇವಿನ ಚೀಲದಲ್ಲಿದ್ದ 10 ಸೆ. ಮೀ ಉದ್ದದ ಮೀನು ಮುಳ್ಳನ್ನು ಗೊತ್ತಿಲ್ಲದೇ ಸೇವಿಸಿತ್ತು. ಪರಿಣಾಮ ಮೂರು ದಿನಗಳಿಂದ ಮೇವು ತಿನ್ನಲಾಗದೆ ಬಳಲಿತ್ತು. ಕೋಳಿಯನ್ನು ಮಾಲೀಕರು ಗಮನಿಸಿದಾಗ ತಂತಿಯಂತಹ ವಸ್ತು ನುಂಗಿರಬಹುದೆಂಬ ಸಂಶಯ ವ್ಯಕ್ತಪಡಿಸಿದ್ದರು. ಅದರಂತೆ ಪಶುವೈದ್ಯರ ಬಳಿ ಕರೆ ತಂದಿದ್ದಾರೆ. ಆಗ ಪಶುವೈದ್ಯರಾದ ಡಾ. ಯುವರಾಜ ಹೆಗಡೆ ಅವರು ಶಸ್ತ್ರಚಿಕಿತ್ಸೆ ಮಾಡಿ ಆ ಮುಳ್ಳನ್ನು ಹೊರ ತೆಗೆದು ಕೋಳಿಯ ಉಳಿಸಿದ್ದಾರೆ.ಅದಲ್ಲದೇ ಈ ರೀತಿಯ ಶಸ್ತ್ರಚಿಕಿತ್ಸೆ ನನಗೆ ವಿನೂತನ ಅನುಭವ ಅಂತಾ ಪಶುವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!