Friday, April 19, 2024
Homeತಾಜಾ ಸುದ್ದಿಐವತ್ತು ವರ್ಷಗಳಿಂದ ವ್ಯಕ್ತಿ ಮೂಗಿನಲ್ಲಿದ್ದ ನಾಣ್ಯವನ್ನು ಹೊರ ತೆಗೆದ ವೈದ್ಯರು

ಐವತ್ತು ವರ್ಷಗಳಿಂದ ವ್ಯಕ್ತಿ ಮೂಗಿನಲ್ಲಿದ್ದ ನಾಣ್ಯವನ್ನು ಹೊರ ತೆಗೆದ ವೈದ್ಯರು

spot_img
- Advertisement -
- Advertisement -

ರಷ್ಯಾ: ಐವತ್ತು ವರ್ಷಗಳಿಂದ ವ್ಯಕ್ತಿಯೊಬ್ಬನ ಮೂಗಿನೊಳಗೆ ಸೇರಿಕೊಂಡಿದ್ದ ಹಳೆಯ ನಾಣ್ಯವೊಂದನ್ನ ವೈದ್ಯರು ಯಶಸ್ವಿಯಾಗಿ ಹೊರತೆಗೆದ ಘಟನೆ ರಷ್ಯಾದ ಮಾಸ್ಕೋ ನಗರದಲ್ಲಿ ನಡೆದಿದೆ.

 59 ವರ್ಷದ ಈ ವ್ಯಕ್ತಿಯ ಮೂಗಿನೊಳಗಿದ್ದ ನಾಣ್ಯದ ಸುತ್ತ ಕಲ್ಲಿನಂಥ ವಸ್ತುಗಳು ಆವರಿಸಿದ್ದವು. ಉಸಿರಾಡಲು ಕಷ್ಟಪಡುತ್ತಿದ್ದ ಈತನ ಮೂಗಿನ ಸ್ಕ್ಯಾನ್ ಮಾಡಿಸಿದಾಗ ಯಾವುದೋ ವಸ್ತು ಇರುವುದು ಬೆಳಕಿಗೆ ಬಂದಿತ್ತು. ನಂತರ ವೈದ್ಯರು ಎಂಡೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ ಮೂಲಕ ಈ ಕಲ್ಲುಗಳನ್ನ ಹೊರತೆಗೆದರು. ಈ ಕಲ್ಲಿನ ಜೊತೆ ಹಳೆಯ ನಾಣ್ಯವೂ ಹೊರಬಂದಿದೆ.

59 ವರ್ಷದ ಈ ವ್ಯಕ್ತಿ 6 ವರ್ಷದ ಬಾಲಕನಾಗಿದ್ದಾಗ ನಾಣ್ಯವನ್ನ ಮೂಗಿನೊಳಗೆ ಹಾಕಿಕೊಂಡಿದ್ದ. ಅದು ಒಳಗೆ ಹೋಗಿ ಅದನ್ನು ಹೊರತೆಗೆಯಲು ಆತನಿಗೆ ಆಗಲೇ ಇಲ್ಲ. ಬಹಳ ಕಟ್ಟುನಿಟ್ಟಿನ ಮತ್ತು ಶಿಸ್ತಿನ ತಾಯಿಗೆ ಈ ವಿಚಾರ ತಿಳಿಸಲು ಭಯಪಟ್ಟಿದ್ದ. ಹೇಗೋ ಉಸಿರಾಡಲು ಸಾಧ್ಯವಾಗುತ್ತಿದೆಯಲ್ಲಾ ಎಂದು ಈತ ಯಾರಿಗೂ ಅದನ್ನ ಹೇಳಲೇ ಇಲ್ಲ. ವರ್ಷಗಳುರುತ್ತಿರುವಂತೆಯೇ ಈತ ಆ ವಿಚಾರವನ್ನೇ ಮರೆತುಬಿಟ್ಟಿದ್ದ. ಐವತ್ತು ವರ್ಷದ ನಂತರ ತನ್ನ ಮೂಗಿನ ಬಲಹೊರಳೆಯಿಂದ ಉಸಿರಾಡಲು ಸಾಧ್ಯವಾಗದೇ ಹೋದಾಗ ವೈದ್ಯರ ಬಳಿ ಹೋದಾಗ ನಾಣ್ಯ ಸೇರಿದ ಕಥೆ ಹೊರಬಂದಿದೆ.

ಸದ್ಯ ಈತ ಅಪಾಯದಿಂದ ಪಾರಾಗಿದ್ಧಾನೆ. ಈ ನಾಣ್ಯ ಹಳೆದ ಸೋವಿಯತ್ ರಷ್ಯಾದಲ್ಲಿ ಅಸ್ತಿತ್ವದಲ್ಲಿ ಒಂದು ಕೋಪೆಕ್ ನಾಣ್ಯವಾಗಿದೆ. 1991ರವರೆಗೂ ಈ ನಾಣ್ಯ ಅಸ್ತಿತ್ವದಲ್ಲಿತ್ತೆನ್ನಲಾಗಿದೆ.

- Advertisement -
spot_img

Latest News

error: Content is protected !!