Friday, June 26, 2026
Homeಕರಾವಳಿಮಂಗಳೂರುಮಂಗಳೂರು: ಮಳೆಯಿಂದಾಗಿ ನಿಯಂತ್ರಣ ತಪ್ಪಿ ಕಾರು ಅಪಘಾತ; ವೈದ್ಯ ಸಾವು

ಮಂಗಳೂರು: ಮಳೆಯಿಂದಾಗಿ ನಿಯಂತ್ರಣ ತಪ್ಪಿ ಕಾರು ಅಪಘಾತ; ವೈದ್ಯ ಸಾವು

- Advertisement -
- Advertisement -

ಮಂಗಳೂರು: ಮಳೆಯಿಂದಾಗಿ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿ ವೈದ್ಯ ಸಾವನ್ನಪ್ಪಿದ ಘಟನೆ ನಂತೂರಿನ ತಾರತೋಟ ಬಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಕೇರಳದ ಆಲಪ್ಪುಝ ನಿವಾಸಿ ಡಾ.ಮೊಹಮ್ಮದ್ ಅಮಲ್ (29) ಮೃತ ವೈದ್ಯ. ಡಾ.ಮೊಹಮ್ಮದ್ ಅಮಲ್ ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮುಗಿಸಿ ಅಲ್ಲಿಯೇ ಡ್ಯೂಟಿಗೆ ಸೇರಿದ್ದರು. ನಿನ್ನೆ ರಾತ್ರಿ 11.45ರ ಸುಮಾರಿಗೆ ಇವರು ಕಣಚೂರು ಮೆಡಿಕಲ್ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿನಿ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ನಂತೂರಿನಿಂದ ಪಂಪೈಲ್ ಕಡೆಗೆ ತನ್ನ ಕಾರಿನಲ್ಲಿ ತೆರಳುತ್ತಿದ್ದಾಗ ಹೆದ್ದಾರಿ ಪ್ರಾಧಿಕಾರದ ಕಚೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದು, ಅತಿ ವೇಗದಿಂದಾಗಿ ಡಿವೈಡರ್ ತಾಗಿ ನಡುವೆ ಹಾಕಿರುವ ಗ್ರಿಲ್ಸ್ ಮೇಲೆ ಹೋಗಿದೆ. ಆನಂತರ ಗ್ರಿಲ್ಸ್ ತಾಗಿಕೊಂಡೇ 2-3 ಪಲ್ಟಿಯಾಗಿ ರಸ್ತೆಯ ಮೇಲೆ ಬಿದ್ದಿದೆ. ಕಾರು ಚಲಾಯಿಸುತ್ತಿದ್ದ ಡಾ.ಮೊಹಮ್ಮದ್ ಅಮಲ್ ಗಂಭೀರ ಗಾಯಗೊಂಡಿದ್ದರು. ಸೀರಿಯಸ್ ಆಗಿದ್ದ ಅವರನ್ನು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಹಿಂದೆ ಮುಂದಿನಿಂದ ಅತಿ ವೇಗದಲ್ಲಿ ವಾಹನಗಳು ತೆರಳುತ್ತಿದ್ದಾಗಲೇ ಹಠಾತ್ ಘಟನೆ ಸಂಭವಿಸಿದೆ. ಇದೇ ವೇಳೆ, ಹಿಂಬದಿಯಿಂದ ಬರುತ್ತಿದ್ದ ಲೋಡ್ ತುಂಬಿದ್ದ ಲಾರಿಯೊಂದು ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದಿದೆ. ಎದುರಿನಲ್ಲಿದ್ದ ವಾಹನಗಳು ಹಠಾತ್ ಬ್ರೇಕ್ ಹಾಕಿದ್ದರಿಂದ ಗಾಬರಿಗೊಂಡ ಲಾರಿ ಚಾಲಕನೂ ಬ್ರೇಕ್ ತುಳಿದಿದ್ದರಿಂದ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲೇ ಅಡ್ಡ ಬಿದ್ದಿದೆ. ಘಟನೆಯಿಂದಾಗಿ ರಾತ್ರಿ ವೇಳೆ ನಂತೂರು- ಪಂಪೈಲ್ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ಟ್ರಾಫಿಕ್ ಜಾಮ್ ಆಗಿತ್ತು. ವೈದ್ಯರ ಜೊತೆಗಿದ್ದ ವಿದ್ಯಾರ್ಥಿನಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!