Thursday, June 26, 2025
Homeತಾಜಾ ಸುದ್ದಿವೈದ್ಯರ ದಿನದಂದೇ ಆತ್ಮಹತ್ಯೆಗೆ ಶರಣಾದ ವೈದ್ಯ ದಂಪತಿ : ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ...

ವೈದ್ಯರ ದಿನದಂದೇ ಆತ್ಮಹತ್ಯೆಗೆ ಶರಣಾದ ವೈದ್ಯ ದಂಪತಿ : ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ ದಾರುಣ ಅಂತ್ಯ

spot_img
- Advertisement -
- Advertisement -

ಪುಣೆ: ವಿಶ್ವ ವೈದ್ಯರ ದಿನದಂದೇ ವೈದ್ಯ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ವನ್ನಾಡಿಯಲ್ಲಿ ನಡೆದಿದೆ. ತಿಂಗಳ ಹಿಂದೆಯಷ್ಟೇ ಸುರದ್ರೂಪಿ ದಂಪತಿ ಸಪ್ತಪದಿ ತುಳಿದಿದ್ದರು. 26 ವರ್ಷದ ಅಂಕಿತಾ, 28 ವರ್ಷದ ನಿಖಿಲ್​ ಇಬ್ಬರು ವೃತ್ತಿಯಲ್ಲಿ ವೈದ್ಯರು. ನೋಡಲು ಕಣ್ಣು ಕುಕ್ಕುವಂತಿದ್ದ ಜೋಡಿ ಇಂದು ಸಾವಿನ ಮನೆ ಸೇರಿದೆ. ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.  ಪತ್ನಿ ಅಂಕಿತಾ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತ್ನಿ ಮೃತಪಟ್ಟಿರುವುದನ್ನು ಕಂಡ ತಕ್ಷಣ ನಿಖಿಲ್​ ಸಹ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.



ಪ್ರಾಥಮಿಕ ತನಿಖೆ ಪ್ರಕಾರ ಗಂಡ-ಹೆಂಡತಿ ಇಬ್ಬರು ಯಾವುದೋ ವಿಚಾರಕ್ಕೆ ಜಗಳವಾಡಿಕೊಂಡಿದ್ದರಂತೆ. ಮಾತಿಗೆ ಮಾತು ಬೆಳೆದು ಮನಸ್ಸುಗಳು ಮುರಿದಿವೆ. ಜಗಳದಿಂದ ನೊಂದ ಅಂಕಿತಾ ಮೊದಲು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯನ್ನೇ ಹಿಂಬಾಲಿಸಿದ ಪತಿ ನಿಖಿಲ್​​ ಸಹ ನೇಣಿಗೆ ಶರಣಾಗಿದ್ದಾರೆ. ಹೊಸದಾಗಿ ಮದುವೆಯಾಗಿದ್ದ ಜೋಡಿ ವನ್ನಾಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.

 ಇಬ್ಬರು ಪ್ರತ್ಯೇಕ ಕಡೆ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಿಖಿಲ್​ ಫೋನ್​ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ವಾಗ್ಯುದ್ಧ ನಡೆದಿದೆ. ಇದರಿಂದ ಕೋಪಗೊಂಡ ಅಂಕಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಖಿಲ್​ ಕೂಡ ಅವರ ಹಾದಿ ಹಿಡಿದ್ದಾರೆ. ಕಳೆದ ಕೆಲ ದಿನಗಳಿಂದ ಇಬ್ಬರು ಮಧ್ಯೆ ಇದ್ದ ವೈಮನಸ್ಸು ಕೆಟ್ಟ ನಿರ್ಧಾರಕ್ಕೆ ಕಾರಣವಾಗಿದೆ. ಇದೀಗ ಎರಡೂ ಕುಟುಂಬ ಕಣ್ಣೀರ ಕಡಲಲ್ಲಿ ಮುಳುಗಿದೆ.

- Advertisement -
spot_img

Latest News

error: Content is protected !!